ಬೆಂಗಳೂರು, ಮಾ.1- ಸಿಲಿಕಾನ್ ಸಿಟಿಯಲ್ಲಿ ಕೊಲೆ, ದರೋಡೆ ಇನ್ನಿತರ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ನಗರದ ಜನತೆಯಲ್ಲಿ ಭೀತಿ ಸೃಷ್ಟಿಸಿದೆ.
ಬ್ಯಾಟರಾಯನಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲೇ ಮನೆಗೆ ನುಗ್ಗಿದ ಹಂತಕರು ಒಂಟಿ ಮಹಿಳೆಯ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸುದ್ದಗುಂಟೆಪಾಳ್ಯ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಲೀಸ್ ವಿಚಾರವಾಗಿ ಮನೆ ಮಾಲೀಕನೇ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ನಡೆದಿದೆ.
ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಕವಿತಾ (26) ಎಂಬುವವರು ಹಂತಕರಿಂದ ಕೊಲೆಯಾದರೆ, ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಕಮಲಮ್ಮ (54) ಮನೆ ಮಾಲೀಕನಿಂದಲೇ ಕೊಲೆಯಾದ ಮಹಿಳೆ.
ಬ್ಯಾಟರಾಯನಪುರ: ಕಸ್ತೂರ ಬಾ ನಗರದ 5ನೆ ಕ್ರಾಸ್, 6ನೆ ಮುಖ್ಯರಸ್ತೆಯಲ್ಲಿ ಶಿವರಾಮ್ ಎಂಬುವವರ ಕುಟುಂಬ ವಾಸವಾಗಿದ್ದು, ಇಂದು ಬೆಳಗ್ಗೆ ಪತ್ನಿ ಕವಿತಾ (26) ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಿದ್ದು, ಶಿವರಾಮ್ ಅವರು ನಾಯಂಡಹಳ್ಳಿಯ ಫ್ಲೈವುಡ್ ಘಟಕವೊಂದರಲ್ಲಿ ಕೆಲಸ ಮಾಡುತ್ತಿದ್ದು, ಅವರು ಸಹ ಎಂದಿನಂತೆ ಕೆಲಸಕ್ಕೆ ತೆರಳಿದ್ದರು.
ಈ ಸಂದರ್ಭದಲ್ಲಿ ಮನೆಯಲ್ಲಿ ಕವಿತಾ ಒಬ್ಬರೇ ಇದ್ದರು. ಬೆಳಗ್ಗೆ 9.15-9.45ರ ಮಧ್ಯೆ ಮನೆಗೆ ನುಗ್ಗಿದ ಹಂತಕರು ಕವಿತಾ ಅವರ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಭೀಕರವಾಗಿ ಕೊಲೆ ಮಾಡಿ ಹಣ-ಆಭರಣ ದೋಚಿ ಪರಾರಿಯಾಗಿದ್ದಾರೆ.
ಕವಿತಾ ಅವರ ತಂದೆ ಪ್ರತಿದಿನ ಇವರ ಮನೆಗೆ ತಿಂಡಿಗೆ ಬರುತ್ತಾರೆ. ಅದರಂತೆ 9.50ರ ಸಮಯದಲ್ಲಿ ಇವರ ತಂದೆ ಮನೆಗೆ ಬಂದಾಗಲೇ ಕವಿತಾ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಹಾಡಹಗಲೇ ಗೃಹಿಣಿಯ ಕೊಲೆ ನಡೆದಿರುವುದು ಸ್ಥಳೀಯ ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೆÇಲೀಸ್ ಆಯುಕ್ತ ಬಿ.ಕೆ.ಸಿಂಗ್, ಡಿಸಿಪಿ ಅನುಚೇತ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಹಂತಕರ ಪತ್ತೆಗೆ ಬಲೆ ಬೀಸಿದೆ.
ಸುದ್ದಗುಂಟೆಪಾಳ್ಯ: ಮನೆ ಲೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಲೀಕ ಹಾಗೂ ಮಹಿಳೆ ನಡುವೆ ಜಗಳ ನಡೆದು ಮಹಿಳೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸುದ್ದಗುಂಟೆಪಾಳ್ಯ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾವರೆಕೆರೆ ಮುಖ್ಯ ರಸ್ತೆ, ಬಿಟಿಎಂ ಒಂದನೆ ಹಂತದ ಗುಂಡು ತೋಪಿನ ಸ್ಲಂ ಕ್ವಾಟ್ರರ್ಸ್ ನಿವಾಸಿ ಕಮಲಮ್ಮ (55) ಕೊಲೆಯಾದ ಮಹಿಳೆ.
ಈ ಸ್ಲಂ ಕ್ವಾಟ್ರರ್ಸ್ನಲ್ಲಿ ಜಗದೀಶ್ ಎಂಬುವವರಿಗೆ ಸೇರಿದ ಮನೆಯಿದ್ದು ಇಲ್ಲಿ ಐದಾರು ವರ್ಷದಿಂದ ಕಮಲಮ್ಮ ಎಂಬುವರು ಲೀಸ್ಗೆ ವಾಸವಾಗಿದ್ದರು.
ಹೌಸ್ ಕೀಪಿಂಗ್ ಕೆಲಸ ಮಾಡುತ್ತ ಕುಟುಂಬ ನಿರ್ವಹಿಸುತ್ತಿದ್ದ ಕಮಲಮ್ಮ ಅವರಿಗೆ ಮನೆ ಖಾಲಿ ಮಾಡುವಂತೆ ಹೇಳಿದ್ದರೂ ಇವರು ಖಾಲಿ ಮಾಡಿರಲಿಲ್ಲ. ರಾತ್ರಿ 9.30ರ ಸಂದರ್ಭದಲ್ಲಿ ಜಗದೀಶ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಇವರ ಮನೆ ಬಳಿ ಬಂದಿದ್ದಾರೆ.
ಈ ವೇಳೆ ಮನೆಯಲ್ಲಿದ್ದ ಕವಿತಾ ಅವರ ಮಗ, ಮಗಳಿಗೆ ನಿಮ್ಮ ತಾಯಿ ಬಳಿ ಮಾತನಾಡಬೇಕು. ಸ್ವಲ್ಪ ಹೊತ್ತು ಹೊರಗೆ ಇರುವಂತೆ ಹೇಳಿದ್ದರಿಂದ ಇವರಿಬ್ಬರು ಹೊರಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಲೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಜಗದೀಶ್, ಕಮಲಮ್ಮ ಅವರ ಜತೆ ಜಗಳವಾಡಿದ್ದಾರೆ.
ಇವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಒಂದು ಹಂತದಲ್ಲಿ ಜಗಳ ವಿಕೋಪಕ್ಕೆ ಹೋದಾಗ ಜಗದೀಶ್ ಚಾಕುವಿನಿಂದ ಕಮಲಮ್ಮನ ಕುತ್ತಿಗೆ ಇರಿದು ಸ್ನೇಹಿತರೊಂದಿಗೆ ಪರಾರಿಯಾಗಿದ್ದಾರೆ.
ಕೆಲ ಸಮಯದ ಬಳಿಕ ಮಕ್ಕಳು ಮನೆಯೊಳಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಕಂಡು ತಕ್ಷಣ ನೆರೆಹೊರೆಯವರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ಸುದ್ದಗುಂಟೆಪಾಳ್ಯ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.