ರಾಷ್ಟ್ರಪಿತ ಮಹಾತ್ಮಗಾಂಧೀಜಿ ಪತ್ರ 50 ಸಾವಿರ ಡಾಲರ್‍ಗಳಿಗೆ ಮಾರಾಟವಾಗಿದೆ

ವಾಷಿಂಗ್ಟನ್, ಮಾ.1-ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರು ಶಾಂತಿದೂತ ಯೇಸುಕ್ರಿಸ್ತ ಅಸ್ಥಿತ್ವದ ಸ್ವರೂಪ ಕುರಿತು ಬರೆದಿದ್ದ ಪತ್ರವೊಂದು 50 ಸಾವಿರ ಡಾಲರ್‍ಗಳಿಗೆ (ಸುಮಾರು 33.50ಲಕ್ಷ ರೂ.ಗಳು) ಮಾರಾಟವಾಗಿದೆ.
ಸಬರಮತಿ ಆಶ್ರಮದಲ್ಲಿ ಏಪ್ರಿಲ್ 6, 1926ರಂದು ಗಾಂಧಿ ಅವರು ಜೀಸಸ್ ಕ್ರೈಸ್ಟ್ ಕುರಿತು ಪತ್ರವೊಂದನ್ನು ಬರೆದಿದ್ದರು. ಶಾಯಿಯಲ್ಲಿ ಬರೆದು ಆ ಪತ್ರಕ್ಕೆ ಮಹಾತ್ಮಗಾಂಧಿ ಸಹಿ ಹಾಕಿದ್ದರು. ಈ ಅಪರೂಪದ ಮೂಲ ಪತ್ರವು ಹಲವು ದಶಕಗಳಿಂದ ಖಾಸಗಿ ಸಂಗ್ರಹವಾಗಿತ್ತು.
ಪೆನ್ಸಿಲ್ವೇನಿಯ ಮೂಲದ ರ್ಯಾಬ್ ಕಲೆಕ್ಷನ್ ಎಂಬ ಸಂಸ್ಥೆ ಈ ಅಮೂಲ್ಯ ಪತ್ರವನ್ನು ಮಾರಾಟ ಮಾಡಿದ್ದು, ಅದು ಭಾರೀ ಬೆಲೆಗೆ ಖರೀದಿಯಾಗಿದೆ.
ಅಮೆರಿಕದ ಕ್ರೈಸ್ತ ಧರ್ಮದ ಪ್ರವೃತಕರಾಗಿದ್ದ ಮಿಲ್ಟನ್ ನ್ಯೂಬೆರ್ರಿ ಫ್ರಾಂಜ್ ಅವರಿಗೆ ಈ ಪತ್ರ ಬರೆದಿದ್ದರು. ಯೇಸು ಮನುಕುಲದ ಮಹಾಶಿಕ್ಷಕ ಎಂದು ಬಣ್ಣಿಸಿದ್ದ ಗಾಂಧಿ ಅವರ ಈ ಪತ್ರ ಅಪಾರ ಪ್ರಶಂಸೆಗೆ ಪಾತ್ರವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ