ಬೀದರ: ಜಗತ್ತಿನಲ್ಲಿರುವ ಮಾನವರೆಲ್ಲರೂ ಒಂದು. ಮನುಷ್ಯ ಮನುಷ್ಯರಲ್ಲಿ ಭೇಧಭಾವ ಮೇಲು, ಕೀಳು ಭಾವನೆ
ಸಲ್ಲದು ಎಂದು ಹಿರಿಯ ನ್ಯಾಯವಾದಿ ಚನಬಸಪ್ಪಾ ಹಾಲಹಳ್ಳಿಯವರು ಹೇಳಿದರು.
ಸ್ಥಳೀಯ ಶಾಹೀನ ಕಾಲೇಜಿನ ಅವರಣದಲ್ಲಿ ಜಿಲ್ಲಾ ಸಧ್ಬಾವನಾ ಮಂಚ್ ಹಮ್ಮಿಕೊಂಡಿರುವ ನಾವೆಲ್ಲರೂ
ಒಂದು-ನಾವೆಲ್ಲರೂ ಬಂಧು ಯೆಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಹಿಂದು-ಮುಸ್ಲಿಂ-
ಸಿಖ್-ಲಿಂಗಾಯತ್- ಕ್ರೈಸ್ತ-ಬೌದ್ಧ- ಜೈನ ಯಾವುದೇ ಧರ್ಮದಲ್ಲಿ ಹುಟ್ಟಿದರೂ ನಾವೆಲ್ಲರೂ ಮನುಷ್ಯರು, ಯಾವುದೇ
ಧರ್ಮಿಯರ ಆತ್ಮದಲ್ಲಿರುವ ದೇವರು ಒಬ್ಬನೆ ಇದ್ದಾನೆ. ನಮ್ಮ ಧಾರ್ಮಕ ವಿಧಾನಗಳು – ಭಾಷೆಗಳು ಬೇರೆ-ಬೇರೆ
ಇದ್ದರೂ ನಾವೆಲ್ಲರೂ ಮೂಲತ ಮನುಷ್ಯ ಜಾತಿಯವರಾಗಿದ್ದೇವೆಯೆಂದು ಚನಬಸಪ್ಪ ಹಾಲಹಳ್ಳಿ ಹೇಳಿದರು.
ಮುಹಮ್ಮದ್ ಅಬ್ದುಲ್ ಖದೀರ ಸಾಬ್ ರವರು ಮಾತನಾಡುತ್ತ ಹಿಂದು-ಮುಸ್ಲಿಂ- ಸಿಖ್-ಇಸಾಯಿ ಭಾಯಿ-
ಭಾಯಿ ಎಂಬ ಸಿದ್ದಾಂತದ ಮೇಲೆ ನಮ್ಮ ಸಂಸ್ಥೆ ನಂಬಿಕೆ ಇಟ್ಟು, ವಿದ್ಯಾರ್ಥಿಗಳಿಗೆ ಪಾಠ ಹೇಳಲಾಗುತ್ತಿದೆ ಎಲ್ಲಾ
ಮನುಷ್ಯಲ್ಲಿರುವ ರಕ್ತ ಒಂದೇ, ನಾವೆಲ್ಲರೂ ಕುಡಿಯುವ ನೀರು-ವಾಸಿಸುವ ನೆಲ, ಸೇವಿಸುವ ಗಾಳಿ ಒಂದೇ ಆಗಿದೆ
ಹಿಗಾಗಿ ನಾವೆಲ್ಲರೂ ಒಂದೇ ಎಂದು ತಿಳಿಯಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಕುಮಾರಿ ಕವಿತಾ ಹುಷಾರೆ ಮಾತನಾಡಿ ಮಕ್ಕಳು ಈ
ನಾಡಿನ ಆಸ್ತಿ ಅವರ ಪಾಲಿನೆ ಪೋಷಣೆ ನಮ್ಮ ಕರ್ತವ್ಯವಾಗಿದೆ. ನಾವುಗಳು ಜಾತಿ-ಧರ್ಮದ ಹೆಸರಿನಲ್ಲಿ ಕಚ್ಚಾಡದೆ
ಮನುಷ್ಯರೆಲ್ಲರೂ ಒಂದೆ ಎಂದು ತಿಳಿದು ನಡೆಯೋಣ ಎಂದರು.
ಇನ್ನೊರ್ವ ಅತಿಥಿ ಮುಹಮ್ಮದ್ ಅಸಿಫುದ್ದಿನ್ ಮಾತನಾಡುತ್ತಾ, ಮಸೀದಿಯಲ್ಲಿ ಮಲ-ಮೂತ್ರ ಆಗಲಿ, ಗುಡಿ
ಗುಂಡಾರದ ಮೇಲೆ ಗುಲಾಲ ಚೆಲ್ಲಿದ ಸಂದರ್ಭದಲ್ಲಿ ನಾವು ಸಹನೆಯಿಂದ ವರ್ತಿಸಬೇಕು, ತಿಳಿಯದ ವ್ಯಕ್ತಗಳು ಏನೊ
ತಪ್ಪು ಮಾಡಿದ್ದಾರೆಂದು ನಾವು ಭಾವಿಸಿ ಶಾಂತಿಯಿಂದ ಆ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕು. ಇಂತಹ
ಸಂದರ್ಭದಲ್ಲಿ ಜಾತಿ-ಜಾತಿಗಳ ಮಧ್ಯ ವೈಶಮ್ಯ ಹುಟ್ಟಿಸದೇ ವೈಚಾರಿಕತೆಯಿಂದ ವರ್ತಿಸಬೇಕು. ಧರ್ಮ ಅರಿಯದ
ಕೆಲವರು ಎಬ್ಬಿಸುವ ಸುಳ್ಳು ಸುದ್ದಿ ನಂಬಬೇಡಿ, ಯಾರೇ ತಪ್ಪು ಮಾಡಿದರೂ ಕ್ಷಮಿಸುವ ಗುಣ ಬೆಳಸಿಕೊಳ್ಳಿ. ಬುದ್ಧಿ ಹೇಳಿ
ತಿದ್ದುವ ಗುಣ ನಮ್ಮದಾಗಿರಬೇಕು ಎಂದರು.