ಇಸ್ಲಾಂ ಪರಂಪರೆ ಕುರಿತ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ

ನವದೆಹಲಿ: ಮಾ-1: ಭಯೋತ್ಪಾದನೆ ಹಾಗೂ ಮೂಲಭೂತೀಕರಣದ ವಿರುದ್ಧ ಹೋರಾಟ ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

 

ದೆಹಲಿಯ ವಿಜ್ಞಾನ ಭವನದಲ್ಲಿ ಇಸ್ಲಾಂ ಪರಂಪರೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ವಿಶ್ವದ ಎಲ್ಲಾ ಪ್ರಮುಖ ಧರ್ಮಗಳನ್ನು ಗೌರವಿಸುತ್ತದೆ. ಪ್ರತೀಯೊಂದು ಧರ್ಮವೂ ಮಾನವೀಯತೆಯ ಮೌಲ್ಯಗಳನ್ನು ಉತ್ತೇಜಿಸುತ್ತವೆ. ಭಾರತದ ಯುವಕರು ಇಸ್ಲಾಂ ಧರ್ಮದಲ್ಲಿರುವ ಮಾನವೀಯತೆಯ ಅಂಶಗಳೊಂದಿಗೆ ತಮ್ಮನ್ನು ತಾವು ಸಂಯೋಜಿಸಿಕೊಳ್ಳಬೇಕು.  ಭಯೋತ್ಪಾದನೆ ಹಾಗೂ ಮೂಲಭೂತೀಕರಣದ ವಿರುದ್ಧ ಹೋರಾಟ ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ ಆದರೆ, ಯುವಕರನ್ನು ತಪ್ಪು ಹಾದಿಗೆಳೆಯುತ್ತಿರುವವರ ವಿರುದ್ಧವಾಗಿದೆ ಎಂದು ಹೇಳಿದರು.

 

ಭಾರತದ ಪ್ರಜಾಪ್ರಭುತ್ವ ಕೇವಲ ರಾಜಕೀಯ ವ್ಯವಸ್ಥೆಯಲ್ಲ. ಇಲ್ಲಿನ ಪ್ರಜಾಪ್ರಭುತ್ವವು ಪುರಾತನವಾದ ಬಹುಸಂಸ್ಕೃತಿಯನ್ನು ಹೊಂದಿದೆ. ಎಲ್ಲಾ ನಂಬಿಕೆಗಳೂ ಕೂಡ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುತ್ತವೆ. ಹೀಗಾಗಿ ನಮ್ಮ ಯುವಕರು ತಮ್ಮನ್ನು ತಾವು ಇಸ್ಲಾಂ ಧರ್ಮದ ಮಾನವೀಯ ಅಂಶಗಳೊಂದಿಗೆ ಸಂಯೋಜಿಸಿಕೊಳ್ಳಬೇಕು ಮತ್ತು ಆಧುನಿತ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ