ಭಾರತ ಭಯೋತ್ಪಾದನೆ ನಿಗ್ರಹ ಪಾಲುದಾರ – ಅಮೆರಿಕ

ವಾಷಿಂಗ್ಟನ್, ಮಾ.1-ಭಾರತವನ್ನು ಮೌಲ್ಯಯುತ ಹಾಗೂ ನಿಕಟ ಭಯೋತ್ಪಾದನೆ ನಿಗ್ರಹ ಪಾಲುದಾರ ಎಂದು ಬಣ್ಣಿಸಿರುವ ಅಮೆರಿಕ, ಈ ಪಿಡುಗು ನಿವಾರಣೆಗೆ ಉಭಯ ದೇಶಗಳ ದ್ವಿಪಕ್ಷೀಯ ಸಹಕಾರದಿಂದ ಉಜ್ವಲ ಭವಿಷ್ಯವಿದೆ ಎಂದು ಹೇಳಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆಸಿರುವ ಮಾತುಕತೆಯು ಎರಡು ರಾಷ್ಟ್ರಗಳ ನಡುವೆ ಶಕ್ತಿಯುತ ಸಹಭಾಗಿತ್ವಕ್ಕೆ ನಾಂದಿಯಾಗಿದೆ ಎಂದು ಅಮೆರಿಕದ ಭಯೋತ್ಪಾದನೆ ನಿಗ್ರಹ ಸಂಚಾಲಕ ನಾಥನ್ ಸೇಲ್ಸ್ ಹೇಳಿದ್ದಾರೆ.
ವಿಶ್ವದ ಅತ್ಯಂತ ಕ್ರೂರ ಮತ್ತು ಭಯಾನಕ ಉಗ್ರಗಾಮಿ ಸಂಘಟನೆ-ಐಎಸ್‍ಐಎಸ್‍ನನ್ನು ಮೂಲೋತ್ಪಾಟನೆಗಾಗಿ ಕಾನೂನು ಜಾರಿ ಕುರಿತ ಸಮಾವೇಶದ ಸಮಾರಂಭದಲ್ಲಿ ಟೆಲಿಕಾನ್ಫರೆನ್ಸ್ ಮೂಲಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ಭಯೋತ್ಪಾದನೆ ದಮನಕ್ಕಾಗಿ ಭಾರತವು ಅಮೆರಿಕಾಗೆ ಅತ್ಯಂತ ಮಹತ್ವದ, ಮೌಲ್ಯಯುತ ಮತ್ತು ನಿಕಟ ಪಾಲುದಾರ ದೇಶ. ಉಗ್ರಗಾಮಿಗಳನ್ನು ನಿಗ್ರಹಿಸುವ ಉಭಯ ದೇಶಗಳ ದ್ವಿಪಕ್ಷೀಯ ಸಹಕಾರಕ್ಕಾಗಿ ಉಜ್ವಲ ಭವಿಷ್ಯವಿದೆ ಎಂದು ಸೇಲ್ಸ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ