ಪಾವಗಡದ ಸೋಲಾರ್ ಪಾರ್ಕ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
ತುಮಕೂರು, ಮಾ.1- ವಿಶ್ವದ ಅತಿ ದೊಡ್ಡ ಶಕ್ತಿ ಸ್ಥಳ ಪಾವಗಡದ ಸೋಲಾರ್ ಪಾರ್ಕ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಜಿಲ್ಲೆಯ ಪಾವಗಡ ತಾಲ್ಲೂಕಿನ ನಾಗಲುಮಡಿಕೆ ಹೋಬಳಿಯ ತಿರುಮಣಿ ಸಮೀಪ 13,000 ಎಕರೆಯಲ್ಲಿ 16,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 2,000 ಮೆಗಾ ವ್ಯಾಟ್ ಸಾಮಥ್ರ್ಯದ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ಗೆ ಇಂದು ಉದ್ಘಾಟನೆಯಾಗಿರುವುದು ಹೆಮ್ಮೆಯ ಸಂಗತಿ.
13,000 ಎಕರೆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಈ ಬೃಹತ್ ಸೋಲಾರ್ ಪಾರ್ಕ್ ಅನ್ನು ನಿರ್ಮಿಸಲಾಗಿತ್ತು. ರೈತರಿಗೆ ವಾರ್ಷಿಕ ಪ್ರತಿ ಎಕರೆಗೆ 21,000 ರೂ. ಬಾಡಿಗೆ ಕೂಡ ನೀಡಲಾಗುತ್ತಿದೆ. ಸರ್ಕಾರದ ಬೃಹತ್ ಯೋಜನೆಯಿಂದ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ನೀಗಲಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ , ಇಂಧನ ಸಚಿವ ಡಿ.ಕೆ.ಶಿವಕುಮಾರ್, ವಿದ್ಯುತ್ ಮತ್ತು ಎಂಎನ್ಆರ್ಇ ಸಚಿವ (ಸ್ವತಂತ್ರ ಪ್ರಭಾರ) ರಾಜ್ಕುಮಾರ್ ಸಿಂಗ್, ಜಿಲ್ಲಾಧಿಕಾರಿ ಮೋಹನರಾಜ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.