ಜಮ್ಮು-ಕಾಶ್ಮೀರದಲ್ಲಿ ಓರ್ವ ಉಗ್ರನ ಸದೆಬಡಿದ ಸೇನೆ: ಮುಂದುವರೆದ ಕಾರ್ಯಾಚರಣೆ

ಬಂಡಿಪೋರಾ:ಮಾ-1: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದು, ಬಂಡಿಪೋರಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಸೆದೆಬಡಿಯಲಾಗಿದೆ ಎಂದು ತಿಳಿದುಬಂದಿದೆ.

 

ಬೆಳಗ್ಗೆ ಬಂಡಿಪೋರಾದ ಶಕ್ರುದಿನ್ ಗ್ರಾಮದ ಹಜಿನ್ ಪ್ರದೇಶದಲ್ಲಿ ಉಗ್ರರು ಅವಿತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದಿದ್ದಾರೆ.  ಈ ವೇಳೆ ಸೈನಿಕರ ಮೇಲೆ ಉಗ್ರರು ಪ್ರತಿದಾಳಿ ನಡೆಸಿದ್ದು, ಸೇನೆ ನಡೆಸಿದ ಎನ್ ಕೌಂಟರ್ ನಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. ಸೇನೆ ದಾಳಿ ಮಾಡುತ್ತಿದ್ದಂತೆಯೇ ಗ್ರಾಮದೊಳಗೆ ನುಸುಳಿದ ಉಗ್ರರು ನಾಪತ್ತೆಯಾಗಿದ್ದು, ಇದೀಗ ಉಗ್ರರ ಶೋಧಕ್ಕಾಗಿ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

 

ಪ್ರಸ್ತುತ ಶಕ್ರದ್ದೀನ್ ಗ್ರಾಮದಾದ್ಯಂತ ಸೇನೆ ಸುತ್ತುವರೆದಿದ್ದು, ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳು ಮತ್ತು ಅರಣ್ಯ ಮಾರ್ಗಗಳನ್ನು ಸೇನೆ ವಶಪಡಿಸಿಕೊಂಡಿದೆ. ಗ್ರಾಮದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ