ಮೈಸೂರು, ಮಾ.1- ನಗರದ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ರುಂಡವಿಲ್ಲದ ದೇಹ ಪತ್ತೆಯಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.
ನಗರಕ್ಕೆ ಸಮೀಪದ ಕಳಸ್ತವಾಡಿಯಲ್ಲಿ ಬೆಳಗ್ಗೆ ದೇಹ ಪತ್ತೆಯಾಗಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಮುಂಜಾನೆ ವಾಯು ವಿಹಾರಕ್ಕೆ ಹೋದವರು ರುಂಡವಿಲ್ಲದ ದೇಹ ಕಂಡು ಗಾಬರಿಯಾಗಿ ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣ ಮೇಟಗಳ್ಳಿ ಠಾಣೆ ಪೆÇಲೀಸರು ಧಾವಿಸಿ ಪರಿಶೀಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ದೇಹ ಎಸೆದಿರಬಹುದೆ ಅಥವಾ ಸ್ಥಳೀಯರನ್ನೇ ಹತ್ಯೆ ಮಾಡಿರಬಹುದೆ, ಕೊಲೆಯಾಗಿರುವ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ.