ಮೈಸೂರು, ಮಾ.1-ಯುವತಿಯೊಬ್ಬಳು ಮರ್ಯಾದಾ ಹತ್ಯೆಗೆ ಬಲಿಯಾಗಿದ್ದಾಳೆಂಬ ಮಾಹಿತಿ ಮೇರೆಗೆ ಪೆÇಲೀಸರು ಯುವತಿಯ ತಂದೆ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಜಿಲ್ಲೆಯ ಎಚ್ಡಿ ಕೋಟೆ ತಾಲೂಕಿನ ಗೊಲ್ಲನಬೀಡು ಗ್ರಾಮದ ಯುವತಿಯು ಅದೇ ಗ್ರಾಮದ ದಲಿತ ಜನಾಂಗದ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಇವರಿಬ್ಬರ ಪ್ರೀತಿ ವಿಷಯ ಮನೆಯವರಿಗೆ ತಿಳಿದು ಆತನಿಂದ ದೂರವಿರುವಂತೆ ಮಗಳಿಗೆ ಬುದ್ಧಿವಾದ ಹೇಳಿದ್ದರು .
ಅಲ್ಲದೆ, ಯುವತಿ ಪೆÇೀಷಕರು ಕಾಲೇಜನ್ನು ಬಿಡಿಸಿದ್ದರು. ಆದರೂ ಯುವತಿ ತನ್ನ ಪ್ರಿಯಕರನೊಂದಿಗೆ ಮಾತುಕತೆ ನಡೆಸುತ್ತಿದ್ದಳು.
ಇವರಿಬ್ಬರ ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಿಂದ ಹೆದರಿ ಮನೆ ತೊರೆದಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಇವರು ಮದುವೆಯಾಗಲು ನಿರ್ಧರಿಸಿದ್ದರೆನ್ನಲಾಗಿದೆ. ಮಗಳ ವರ್ತನೆಯಿಂದ ಬೇಸತ್ತ ಪೆÇೀಷಕರು ಫೆ.21ರಂದು ತಮ್ಮ ಜಮೀನಿನಲ್ಲಿ ಆಕೆಗೆ ವಿಷ ಕುಡಿಸಿ ಕೊಲೆ ಮಾಡಿ ಸುಟ್ಟು ಹಾಕಿದ್ದಾರೆಂಬ ಆರೋಪ ಕೇಳಿಬಂದಿದೆ.??
ಈ ಹಿನ್ನೆಲೆಯಲ್ಲಿ ಎಚ್ಡಿ ಕೋಟೆ ಠಾಣೆ ಪೆÇಲೀಸರು ಯುವತಿಯ ತಂದೆ ಕುಮಾರ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.