ಭೋಪಾಲ್/ಭುವನೇಶ್ವರ್, ಫೆ.28-ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮಧ್ಯಪ್ರದೇಶದ ಮುಂಗಾವೊಲಿ ಮತ್ತು ಕೊಲಾರಸ್ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದರೆ, ಓಡಿಶಾದ ಬಿಜೆಪುರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜು ಜನತಾದಳ (ಬಿಜೆಡಿ) ಭರ್ಜರಿ ಜಯ ದಾಖಲಿಸಿದೆ.
ಎರಡೂ ರಾಜ್ಯಗಳ ಫಲಿತಾಂಶದಿಂದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಮಧ್ಯಪ್ರದೇಶದಲ್ಲಿ ಶಿವರಾಜ್ಸಿಂಗ್ ಚೌವಾಣ್ ನೇತೃತ್ವದ ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ಫಲಿತಾಂಶ ಇರಿಸುಮುರಿಸು ಉಂಟು ಮಾಡಿದೆ.
ಮುಂಗಾವೊಲಿ ಮತ್ತು ಕೊಲಾರಸ್ ವಿಧಾನಸಭಾ ಕ್ಷೇತ್ರಗಳಲ್ಲಿ ಕ್ರಮವಾಗಿ ಕಾಂಗ್ರೆಸ್ನ ಬೃಜೇಂದ್ರ ಸಿಂಗ್ ಯಾದವರ ಹಾಗೂ ಮಹೇಂದ್ರ ಸಿಂಗ್ ಯಾದವ್ ಬಿಜೆಪಿ ಅಭ್ಯರ್ಥಿಗಳ ತೀವ್ರ ಪೈಪೆÇೀಟಿ ನಡುವೆ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶವು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹೊಸ ಹುಮ್ಮಸ್ಸು ನೀಡಿದೆ.
ಒಡಿಶಾದ ಜಿಜೇಪುರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜು ಜನತಾದಳ (ಬಿಜೆಡಿ) ಅಭ್ಯರ್ಥಿ ರೀಟಾ ಸಾಹು ಭರ್ಜರಿ ಜಯ ಗಳಿಸಿದ್ದಾರೆ. ಅವರು ಬಿಜೆಪಿ ಪ್ರತಿಸ್ಪರ್ಧಿ ಅಶೋಕ್ ಪಾಣಿಗ್ರಹಿ ಅವರನ್ನು ಪರಾಭವಗೊಳಿಸಿದ್ದಾರೆ. ಈ ರಾಜ್ಯದಲ್ಲೂ ಬಿಜೆಪಿಗೆ ಫಲಿತಾಂಶದಿಂದ ಹಿನ್ನಡೆಯಾಗಿದೆ.