ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು 49,999 ರೂಪಾಯಿ ವಂಚನೆ

ಕೆಜಿಎಫ್, ಫೆ.28- ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಎಟಿಎಂ ಕಾರ್ಡಿನ ನಂಬರ್ ಪಡೆದು 49,999 ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.
ಕಾರಹಳ್ಳಿಯ ಪೆರುಮಾಳ್ ಎಂಬುವರಿಗೆ ಅಪರಿಚಿತನೊಬ್ಬ ಕರೆ ಮಾಡಿ, ನಾನು ಎಸ್‍ಬಿಐ ಬ್ಯಾಂಕ್ ಮಾನೇಜರ್ ಮಾತನಾಡುತ್ತಿದ್ದೇನೆ. ನಿಮ್ಮ ಎಟಿಎಂ ಕಾರ್ಡ್ ನಂಬರ್ ಹೇಳುವಂತೆ ಹಾಗೂ ನಂತರ ಒಟಿಪಿ ನಂಬರ್ ತಿಳಿಸುವಂತೆ ಕೇಳುತ್ತಾನೆ. ಅದನ್ನು ನಂಬಿದ ಪೆರುಮಾಳ್ ಅವರು ಕೇಳಿದ ಎಲ್ಲಾ ಮಾಹಿತಿಯನ್ನು ನೀಡಿದ್ದಾರೆ. ಕೊಂಚ ಸಮಯದಲ್ಲಿಯೇ ಎರಡು ಕಂಪೆನಿಗಳಿಗೆ ಒಟ್ಟು 49,999 ರೂಪಾಯಿ ಡ್ರಾ ಆಗಿರುವುದು ಕಂಡು ಬಂದಿದೆ. ಈ ಸಂಬಂಧವಾಗಿ ಪೆರುಮಾಳ ನೀಡಿದ ದೂರಿನನ್ವಯ ಸಿಇಎನ್ ಪೆÇಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಫೆÇೀನ್ ನಂಬರ್ 7296044984 ಆಗಿದ್ದು, ಓಲಾ ಕ್ಯಾಬ್ ಮತ್ತು ಪ್ಯೂಜರ್‍ಪೇ ಅಕೌಂಟ್‍ಗೆ ಹಣ ವರ್ಗಾವಣೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ