
ಮಳವಳ್ಳಿ, ಫೆ.28- ಸಾಲಬಾಧೆ ತಾಳಲಾರದೆ ತಾಲ್ಲೂಕಿನ ಅಮತೇಶ್ವರನಹಳ್ಳಿಯಲ್ಲಿ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗ್ರಾಮದ ನಿಂಗೇಗೌಡ ಎಂಬುವರ ಪುತ್ರ ರಾಜಣ್ಣ(50)ಮೃತ ರೈತ. ಇವರಿಗೆ ಸುಮಾರು ಒಂದೂವರೆ ಎಕರೆ ಜಮೀನಿದ್ದು ಇದರಲ್ಲಿ ಕಬ್ಬು, ರಾಗಿ, ಭತ್ತದ ಬೆಳೆಯನ್ನು ಬೆಳೆಯುತ್ತಿದ್ದರು. ಕೃಷಿಗಾಗಿ ತಮ್ಮ ಪತ್ನಿ ದಂಡೀರಮ್ಮ ನವರು ಒಡವೆಗಳನ್ನು ಮದ್ದೂರಿನ ಗಿರವಿ ಅಂಗಡಿಯೊಂದರಲ್ಲಿ 50 ಸಾವಿರಕ್ಕೆ ಅಡಮಾನವಿಟ್ಟಿದ್ದರು.
ಜತೆಗೆ ಖಾಸಗಿ ವ್ಯಕ್ತಿಗಳಿಂದ 1ಲಕ್ಷ ರೂ. ಕೈಸಾಲ ಪಡೆದಿದ್ದರು ಎನ್ನಲಾಗಿದೆ. ತೀವ್ರ ಬರಗಾಲದಿಂದ ಬೆಳೆಯಿಲ್ಲದೆ ಬೇಸತ್ತಿದ್ದ ರಾಜಣ್ಣ ರಾತ್ರಿ ಮನೆಯ ಹಿಂಭಾಗದಲ್ಲಿ ವಿಷ ಸೇವಿಸಿ ನರಳಾಡುತ್ತಿದ್ದನ್ನು ನೋಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಈ ಸಂಬಂಧ ಮೃತರ ಪುತ್ರ ಸಿದ್ದರಾಜು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಷಯ ತಿಳಿದಕೂಡಲೆ ಸ್ಥಳಕ್ಕೆ ಪಿಎಸ್ಐ ಮಂಜು, ಸಿಪಿಐ ಶ್ರೀಕಾಂತ, ಕೃಷಿ ಅಧಿಕಾರಿ ರಮೇಶ್ ಭೆÉೀಟಿ ನೀಡಿದ್ದಾರೆ.