ಮುಂಬೈ/ಶಿವಕಾಶಿ, ಫೆ.27-ತನ್ನ ಅದ್ಭುತ ಸೌಂದರ್ಯ ಮತ್ತು ಮನೋಜ್ಞ ನಟನೆ ಮೂಲಕ ಲP್ಷÁಂತರ ಸಿನಿಮಾರಸಿಕರನ್ನು ರಂಜಿಸಿದ್ದ ಮೋಹಕ ತಾರೆ ಶ್ರೀದೇವಿ ಕೆಲಕಾಲ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ತಮಿಳುನಾಡಿನಲ್ಲಿ 1989ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತಂದೆ, ಕಾಂಗ್ರೆಸ್ ಅಭ್ಯರ್ಥಿ ಕೆ. ಅಯ್ಯಪ್ಪನ್ ಅವರ ಪರವಾಗಿ ಶಿವಕಾಶಿ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀದೇವಿ ಚುನಾವಣಾ ಪ್ರಚಾರ ಮಾಡಿದ್ದರು.
ಖ್ಯಾತ ಚಿತ್ರ ನಟ ಮತ್ತು ಮುಖ್ಯಮಂತ್ರಿಯಾಗಿದ್ದ ಎಂ.ಜಿ.ರಾಮಚಂದ್ರನ್ ಅವರ ನಿಧನದ ನಂತರ ತಮಿಳುನಾಡಿನಲ್ಲಿ ನಡೆದ ಪ್ರಥಮ ವಿಧಾನಸಭೆ ಚುನಾವಣೆ ಅದಾಗಿತ್ತು.
ಈ ಚುನಾವಣೆಯಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿತ್ತು. ಡಿಎಂಕೆ, ಕಾಂಗ್ರೆಸ್ ಮತ್ತು ಎಐಎಡಿಎಂಕೆಯ ಎರಡು ಬಣಗಳ (ಜಯಲಲಿತಾ ನೇತೃತ್ವದ ಗುಂಪು ಮತ್ತು ಎಂ.ಜಿ.ಆರ್. ವಿಧವಾ ಪತ್ನಿ ಜಾನಕಿ ಬಣ) ನಡುವೆ ಬಿರುಸಿನ ಪೈಪೆÇೀಟಿ ಇತ್ತು.
ಅಪ್ಪಟ ಕಾಂಗ್ರೆಸ್ಸಿಗರಾದ ಅಯ್ಯಪ್ಪನ್ ಅವರನ್ನು ಶಿವಕಾಶಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಣಕ್ಕೆ ಇಳಿಸಿತು. ಇವರು ರಾಜೀವ್ ಗಾಂಧಿಗೆ ಆಪ್ತರಾಗಿದ್ದರು.
ಶಿವಕಾಶಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ತಂದೆಯ ಪರ ಶ್ರೀದೇವಿ ಸ್ಟಾರ್ ಕ್ಯಾಂಪೈನರ್ ಆಗಿ ಪ್ರಚಾರ ಮಾಡಿದ್ದರು. ಆದರೆ ಯಾವುದೇ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿರಲಿಲ್ಲ. ಇನ್ನೊಂದೆಡೆ ಮತ್ತೊಬ್ಬ ಜನಪ್ರಿಯ ತಾರೆ ಜಯಲಲಿತಾ ತಮ್ಮ ಬಂಡಾಯ ಅಭ್ಯರ್ಥಿ ಪರವಾಗಿ ಭರ್ಜರಿ ಮತಯಾಚನೆ ಮಾಡಿದ್ದರು.
ಆದರೆ ಚುನಾವಣೆಯಲ್ಲಿ ಶ್ರೀದೇವಿಯವರ ತಂದೆ ಅಯ್ಯಪ್ಪನ್ ಅವರನ್ನು ಸುಮಾರು 5,000 ಮತಗಳ ಅಂತರದಿಂದ ಡಿಎಂಕೆಯ ಪಿ.ಶ್ರೀನಿವಾಸನ್ ಪರಾಭವಗೊಳಿಸಿದರು. ಈ ಸೋಲಿನೊಂದಿಗೆ ಅಯ್ಯಪ್ಪನ್ ರಾಜಕೀಯ ಆಕಾಂಕ್ಷೆ ಕಮರಿ ಹೋಯಿತು. ಶ್ರೀದೇವಿ ಸಹ ರಾಜಕಾರಣದಿಂದ ದೂರ ಉಳಿದರು.