ಬೇಲೂರು, ಫೆ.27- ಮರಳು ವಿಚಾರವಾಗಿ ಮಾತನಾಡಲು ಕರೆದೊಯ್ದು ತಾಲೂಕು ಪಂಚಾಯಿತಿ ಬಿಜೆಪಿ ಸದಸ್ಯ ನವಿಲಹಳ್ಳಿ ಕಿಟ್ಟಿ(36) ಎಂಬುವವರನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ವಿಕ್ರಮ್ ಹಾಗೂ ರಘು (ಅಪ್ಪಿ) ವಿರುದ್ಧ ಅರೇಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕಿಟ್ಟಿಯ ತಂದೆ ತಮ್ಮಣ್ಣಗೌಡರು ಅರೇಹಳ್ಳಿ ಪೆÇಲೀಸರಿಗೆ ದೂರು ನೀಡಿದ್ದು, ನನ್ನ ಮಗ ಕಿಟ್ಟಿಯನ್ನು ಮರಳಿನ ವಿಚಾರವಾಗಿ ಮಾತನಾಡಲು ವಿಕ್ರಮ್ ಹಾಗೂ ರಘು ಎಂಬುವವರು ಕರೆದೊಯ್ದು ಕೊಲೆ ಮಾಡಿ ನಂತರ ಮಗನ ಮೃತದೇಹವನ್ನು ಬೇಲೂರು ಸರ್ಕಾರಿ ಆಸ್ಪತ್ರೆಗೆ ತಂದು ಹಾಕಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮಣ್ಣಗೌಡರ ದೂರಿನ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೆÇಲೀಸರು ಕ್ರಮ ಕೈಗೊಂಡಿದ್ದಾರೆ.
ಮೃತ ನವಿಲಹಳ್ಳಿ ಕಿಟ್ಟಿಯನ್ನು ಕೊಲೆ ಮಾಡಿ ಮೃತ ದೇಹವನ್ನು ಸರಕಾರಿ ಆಸ್ಪತ್ರೆಗೆ ತಂದು ಹಾಕಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಮೃತನ ಸಂಬಂಧಿಕರು ಹಾಗೂ ಸ್ನೇಹಿತರು ಸರ್ಕಾರಿ ಆಸ್ಪತ್ರೆ ಮುಂಭಾಗ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ರಸ್ತೆಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್ವಾಡ್ ಬೇಲೂರಿಗೆ ಆಗಮಿಸಿ ಮೃತನ ಕುಟುಂಬದವರೊಂದಿಗೆ ಚರ್ಚಿಸಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ವೃತ್ತ ನಿರೀಕ್ಷಕ ಲೋಕೇಶ್, ತಾಪಂ ಸದಸ್ಯ ಕಿಟ್ಟಿ ಅವರ ಸಾವಿಗೆ ಸಂಬಂಧಿಸಿದಂತೆ ಮೃತರ ತಂದೆ ತಮ್ಮಣ್ಣಗೌಡರು ಕೊಲೆ ಮಾಡಿದ್ದಾರೆಂದು ವಿಕ್ರಮ್ ಹಾಗೂ ರಘು ಎಂಬುವರ ಮೇಲೆ ದೂರು ನೀಡಿದ್ದಾರೆ. ಇದನ್ನು ಆಧರಿಸಿ ಪ್ರಕರಣ ದಾಖಲಿಸಿದ್ದು, ನಂತರ ಘಟನೆ ವಾಸ್ತವಾಂಶದ ಬಗ್ಗೆ ಮೇಲಾಧಿಕಾರಿಗಳು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.