ಮನೆಗಳವು ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯರೇ ಹಿಡಿದು ಥಳಿಸಿ ಒಪ್ಪಿಸಿದ್ದಾರೆ

ಕಲಬುರಗಿ. ಫೆ.27- ಮೊಬೈಲ್ ಮತ್ತು ಮನೆಗಳವು ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯರೇ ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಚಾಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತನ್ನ ಖತರ್ನಾಕ್ ಬುದ್ದಿಯಿಂದ ಸ್ಥಳಿಯರ ಕೈಗೆ ಸಿಕ್ಕಿ ಬಿದ್ದು ಸಖತ್ ಕೂಸಾ ತಿಂದಿರುವ ಕಲಬುರಗಿ ಹನುಮಾನ್ ತಾಂಡಾ ನಿವಾಸಿ ಅರವಿಂದ್ ಪವಾರ್, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಮುಂಜಾನೆ 9ಗಂಟೆ ಸುಮಾರಿನಲ್ಲಿ ಕಲಬುರಗಿಯ ಶಹಬಜಾರ್‍ನ ಜಿಡಿಎ ಕಾಲೋನಿಯಲ್ಲಿ ಕಳ್ಳತನ ಮಾಡಲು ಯತ್ನಿಸಿದ ವೇಳೆ ಸ್ಥಳಿಯರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಚಾಕಾ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ