ಕೆಎಸ್‍ಆರ್‍ಟಿಸಿಗೆ ಅಂತರರಾಷ್ಟ್ರೀಯ ಸಾರಿಗೆ ಯೂನಿಯನ್ ಬಸ್ ಎಕ್ಸಲೆನ್ಸ್ ರನ್ನರ್ ಅಪ್ ಪ್ರಶಸ್ತಿ.

ನವದೆಹಲಿ, ಫೆ.27- ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಸ್‍ಆರ್‍ಟಿಸಿಗೆ ಮೊಟ್ಟ ಮೊದಲ ಬಾರಿಗೆ ಅಂತರರಾಷ್ಟ್ರೀಯ ಸಾರಿಗೆ ಯೂನಿಯನ್ ಬಸ್ ಎಕ್ಸಲೆನ್ಸ್ ರನ್ನರ್ ಅಪ್ ಪ್ರಶಸ್ತಿಯನ್ನು ನೀಡಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್, ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯದ ಕಾರ್ಯದರ್ಶಿ ಯದುವೀರ್ ಸಿಂಗ್ ಮಲ್ಲಿಕ್, ಜಂಟಿ ಕಾರ್ಯದರ್ಶಿ ಅಭಯ್ ದಾಮ್ಲೆ ಸನ್ಮಾನಿಸಿದರು.
ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಸಣ್ಣ ಹಾಗೂ ಮಧ್ಯಮ ನಗರ ಹಾಗೂ ಪಟ್ಟಣಗಳಲ್ಲಿ ನಗರ ಸಾರಿಗೆ ಸೇವೆಯನ್ನು ಪ್ರಾರಂಭಿಸಿದ ಸಾರಿಗೆ ಸಂಸ್ಥೆ ಕೆಎಸ್‍ಆರ್‍ಟಿಸಿಗೆ ಇದೊಂದು ಹಿರಿಮೆಯ ಸಂಕೇತ.

ಪ್ರಸ್ತುತ 16 ನಗರಗಳಲ್ಲಿ ಒಟ್ಟು 795 ಬಸ್‍ಗಳು ಕಾರ್ಯಾಚರಣೆಯಾಗುತ್ತಿದ್ದು, ಪ್ರತಿ ದಿನ ಸರಾಸರಿ 4.4 ಲಕ್ಷ ಪ್ರಯಾಣಿಕರು ನಗರ ಸಾರಿಗೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಿಗಮದ ಈ ಉಪಕ್ರಮಕ್ಕೆ ಪ್ರತಿಷ್ಠಿತ ಅಂತರರಾಷ್ಟ್ರೀಯ ರಸ್ತೆ ಸಾರಿಗೆ ಯೂನಿಯನ್ ಬಸ್ ಎಕ್ಸೆಲೆನ್ಸ್ ರನ್ನರ್ ಅಪ್ ಪ್ರಶಸ್ತಿ ಲಭಿಸಿರುವುದು ಸಿಬ್ಬಂದಿಗಳಿಗೆ ಸಂತಸ ತಂದಿದೆ ಎಂದು ಉಮಾಶಂಕರ್ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಕೂಡ ಪಾಲ್ಗೊಂಡು ನಮ್ಮ ಸಾರಿಗೆ ಸಂಸ್ಥೆಗೆ ದೊಡ್ಡ ಕೀರ್ತಿ ತಂದಿದೆ ಎಂದು ಖುಷಿ ಪಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ