ನೀತಿ ಸಂಹಿತೆ ಜಾರಿಗೂ ಮೊದಲೇ ಕಳೆದ ಸಾಲಿನ ಪಿಒಡಬ್ಲ್ಯೂ ಕಾಮಗಾರಿಗಳ ಅನುಷ್ಠಾನಕೆ ಕ್ರಮ ಕೈಗೊಳ್ಳಲು ಆಗ್ರಹ

ನೀತಿ ಸಂಹಿತೆ ಜಾರಿಗೂ ಮೊದಲೇ ಕಳೆದ ಸಾಲಿನ ಪಿಒಡಬ್ಲ್ಯೂ ಕಾಮಗಾರಿಗಳ ಅನುಷ್ಠಾನಕೆ ಕ್ರಮ ಕೈಗೊಳ್ಳಲು ಆಗ್ರಹ

ಬೆಂಗಳೂರು, ಫೆ.27- ವಿಧಾನಸಭೆ ಚುನಾಣೆಗೆ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಕಳೆದ ಸಾಲಿನ ಪಿಒಡಬ್ಲ್ಯೂ ಕಾಮಗಾರಿಗಳ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಪಾಲಿಕೆ ಸಭೆಯಲ್ಲಿಂದು ಸಲಹೆ ನೀಡಿದರು.
2018-19ರ ಬಜೆಟ್ ನಾಳೆ ಬಿಬಿಎಂಪಿಯಲ್ಲಿ ಮಂಡನೆಯಾಗಲಿದೆ. ಹಿಂದಿನ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದ್ದ ಪಿಒಡಬ್ಲ್ಯೂ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಳೆ ಬಜೆಟ್ ಮಂಡನೆಯಾಗುತ್ತಿದೆ. ಮಾರ್ಚ್ 31 ರೊಳಗೆ ಕಳೆದ ಸಾಲಿನ ಪಿಒಡಬ್ಲ್ಯೂ ಕಾಮಗಾರಿಗಳು ಆಗಬೇಕಾಗಿತ್ತು. ಆನ್‍ಲೈನ್ ಟೆಂಡರ್ ಆಗುತ್ತಿರುವುದರಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಗುತ್ತಿದೆ. ಹೀಗೆ ವಿಳಂಬವಾದರೆ ನೀತಿ ಸಂಹಿತೆ ಜಾರಿಯಾಗಲಿದೆ. ಯಾವುದೇ ಕೆಲಸ ಪೂರ್ಣಗೊಳಿಸಲು ಆಗುವುದಿಲ್ಲ. ಆದ್ದರಿಂದ ಆಯುಕ್ತರು ಟೆಂಡರ್ ಲೋಪದೋಷ ಸರಿಪಡಿಸಿ ಬೇಗ ಟೆಂಡರ್ ಕರೆದು ಮಾರ್ಚ್ 31ರೊಳಗೆ ಏಕಗವಾಕ್ಷಿ ಮೂಲಕ ಎಲ್ಲ ಕಾಮಗಾರಿಗಳಿಗೆ ಕಾರ್ಯಾದೇಶ ಹೊರಡಿಸಬೇಕು ಎಂದು ತಿಳಿಸಿದರು.
ಕಳೆದ ಪಾಲಿಕೆ ಸಭೆಯಲ್ಲೇ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಡಚಣೆಯಾಗುವುದಿಲ್ಲ ಎಂದು ಆಯುಕ್ತರು ಭರವಸೆ ನೀಡಿದ್ದರು. ನಾವು ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದ್ರೆ ಅಧಿಕಾರಿಗಳು ಹಣ ಬಿಡುಗಡೆ ಮಾಡಲು ನಿಧಾನ ಮಾಡುತ್ತಿದ್ದಾರೆ. ತಕ್ಷಣ ಬೋರ್‍ವೆಲ್ ಸರಿಪಡಿಸಿ, ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಶಿವರಾಜ್ ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ