ಬೆಂಗಳೂರು, ಫೆ.26- ಯುವಕನ ತಲೆ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಪೀಣ್ಯ ಪೊಲೀಸಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ತುಮಕೂರು ನಿವಾಸಿಯಾದ ಸಂತು ಅಲಿಯಾಸ್ ಸಂತೋಷ್ (28) ಕೊಲೆಯಾದ ದುರ್ದೈವಿ.
ಕಾರು ಚಾಲಕ ವೃತ್ತಿ ಮಾಡುತ್ತಿದ್ದ ಸಂತೋಷ್ ದೊಡ್ಡಬಿದರಕಲ್ಲಿನಲ್ಲಿ ವಾಸವಾಗಿದ್ದರು.
ಚನ್ನನಾಯಕನಹಳ್ಳಿ ರಸ್ತೆ, ಅನ್ನಪೂರ್ಣೇಶ್ವರಿ ಲೇಔಟ್‍ನ ತಿಪ್ಪೇನಹಳ್ಳಿ ಬಳಿ ರಾತ್ರಿ ಯಾರೋ ದುಷ್ಕರ್ಮಿಗಳು ಈತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಯಾರು, ಯಾವ ಕಾರಣಕ್ಕಾಗಿ ಈತನನ್ನು ಕೊಲೆ ಮಾಡಿದ್ದಾರೆಂಬುದು ತಿಳಿದು ಬಂದಿಲ್ಲ.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.