ಚೆನ್ನೈ,ಫೆ.26- ತ್ರಿವರ್ಣ ಧ್ವಜದಲ್ಲೂ ಕೇಸರಿ ಇದೆ. ಆದರೆ ಅದು ಇಡೀ ಧ್ವಜವನ್ನು ವ್ಯಾಪಿಸಬಾರದಷ್ಟೇ ಎಂದು ಹೇಳುವ ಮೂಲಕ ನಟ ಕಮಲï ಹಾಸನ್ ತಮ್ಮ ರಾಜಕೀಯ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿದ್ದಾರೆ.
ತಮಿಳು ವಾರಪತ್ರಿಕೆಯೊಂದರಲ್ಲಿ ಅಂಕಣ ಬರೆದಿರುವ ಕಮಲï, ನನ್ನ ರಾಜಕೀಯವು ಜಾತಿ ಮತ್ತು ಧರ್ಮಗಳಿಂದ ಮುಕ್ತವಾಗಿದ್ದಾಗಿದೆ. ಆಗಂತ ನಾನು ಹಿಂದೂ ಧರ್ಮ ವಿರೋಧಿ ಅಲ್ಲ. ತ್ರಿವರ್ಣಧ್ವಜದಲ್ಲಿ ಕೇಸರಿಗೂ ಸ್ಥಾನವಿದೆ ಆದರೆ ಕೇಸರಿಯೇ ಇಡೀ ಧ್ವಜ ವ್ಯಾಪಿಸಿದರೆ ಚೆನ್ನಾಗಿರದು ಎಂದು ಹೇಳಿಕೊಂಡಿದ್ದಾರೆ.