![kashmir-police-attack](http://kannada.vartamitra.com/wp-content/uploads/2018/02/kashmir-police-attack-616x381.jpg)
ಶ್ರೀನಗರ:ಫೆ-26: ದಕ್ಷಿಣ ಕಾಶ್ಮೀರದ ಟ್ರಾಲ್ ಪಟ್ಟಣದಲ್ಲಿ ಉಗ್ರರು ಪೊಲೀಸ್ ಠಾಣೆಯ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದು, ಸ್ಫೋಟದಲ್ಲಿ ಓರ್ವ ಉಗ್ರ ಮೃತಪಟ್ಟಿದ್ದಾರೆ ಮತ್ತು ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಬಂಧಿತ ಉಗ್ರನನ್ನು ಬಿಡಿಸಿಕೊಳ್ಳಲು ಉಗ್ರರು ಗ್ರೆನೇಡ್ ಸ್ಫೋಟಿಸಿದ್ದಾರೆ. ಆದರೆ ಘಟನೆಯಲ್ಲಿ ಬಂಧಿತ ಉಗ್ರ ಮುಸ್ತಾಖ್ ಅಹ್ಮದ್ ಚೊಪನ್ ಮೃತಪಟ್ಟಿದ್ದಾನೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಎಸ್ ಪಿ ವಾಯಿದ್ ಅವರು ಹೇಳಿದ್ದಾರೆ.
ಮೃತ ಉಗ್ರ ಚೊಪನ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ್ದು, ಪೊಲೀಸ್ ವಶದಲ್ಲಿದ್ದ ಎಂದು ಅವರು ತಿಳಿಸಿದ್ದಾರೆ.