ಜಮ್ಮು, ಫೆ.26-ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿನ ಅಂತಾರಾಷ್ಟ್ರೀಯ ಗಡಿ(ಐಬಿ) ಒಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಮೂಲದ ಭಯೋತ್ಪಾದಕರನ್ನು ಗಡಿ ಭದ್ರತಾ ಪಡೆ(ಬಿಎಸ್ಎಫ್) ಯೋಧರು ಹಿಮ್ಮೆಟ್ಟಿಸಿದ್ದಾರೆ.
ರಾಮ್ಗಢ್ ವಲಯದ ಐಬಿಯಲ್ಲಿ ಇಂದು ಮುಂಜಾನೆ 5ರ ಸುಮಾರಿನಲ್ಲಿ ಕೆಲವು ಶಂಕಾಸ್ಪದ ಚಲನೆಗಳನ್ನು ಬಿಎಸ್ಎಫ್ ಯೋಧರು ಗಮನಿಸಿದರು.
ಉಗ್ರರು ಒಳ ನುಸುಳಲು ಯತ್ನಿಸುತ್ತಿದ್ದಂತೆ ಯೋಧರು ಹಲವಾರು ಸುತ್ತು ಗುಂಡಿನ ದಾಳಿ ಮತ್ತು ಬೆಳಕು ಚಿಮ್ಮಿಸುವ ಇಲ್ಯೂಮಿನೇಷನ್ ಫ್ಲೇರ್ಗಳನ್ನು ಪ್ರಯೋಗಿಸಿದರು. ಇದರಿಂದ ಹೆದರಿದ ಭಯೋತ್ಪಾದಕರು ಪರಾರಿಯಾದರು ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.