ಚೆನ್ನೈ, ಫೆ.24- ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಸಿನಿಮಾಗಳು ಬಿಡುಗಡೆಗೆ ಮುನ್ನವೇ ಪೋಸ್ಟರ್ನಿಂದ ರಿಲೀಸ್ವರೆಗೂ ಸುದ್ದಿಯು ಭರ್ಜರಿ ಸದ್ದು ಮಾಡುತ್ತವೆ. ಇದಕ್ಕೆ ಕಾಲ ಸಿನಿಮಾ ಕೂಡ ಹೊರತಾಗಿಲ್ಲ.
ಈ ಹಿಂದೆ ಸ್ಟೈಲ್ಕಿಂಗ್ ರಜನಿ ವಿಶಿಷ್ಟ ಗೇಟ್ಅಪ್ನಲ್ಲಿರುವ ಕಾಲ ಪೋಸ್ಟರ್ಗಳು ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿದ್ದವು. ಈಗ ಮಾ.1ರಂದು ಕಾಲ ಟೀಸರ್ (ಒಂದು ನಿಮಿಷಕ್ಕಿಂತ ಕಡಿಮೆ ಇರುವ ದೃಶ್ಯ ತುಣಕು) ಬಿಡುಗಡೆಯಾಗಲಿದ್ದು ಕುತೂಹಲ ಕೆರಳಿಸಿದೆ.
ಟೀಸರ್ ಬಿಡುಗಡೆ ಸುದ್ದಿಯನ್ನು ಅವರ ಅಳಿಯ, ನಟ ಮತ್ತು ಚಿತ್ರದ ನಿರ್ಮಾಪಕ ಧನುಷ್ ಘೋಷಿಸಿದ್ದಾರೆ.
ಚೆನ್ನೈನ ವಂಡರ್ಬಾರ್ ಸ್ಟುಡಿಯೋದಲ್ಲಿ ರಿಲೀಸ್ ಆಗಲಿದ್ದು, ಈ ಟೀಸರ್ ಹೊಸ ದಾಖಲೆ ಸೃಷ್ಟಿಸುವ ನಿರೀಕ್ಷೆ ಇದೆ.