ಬೆಂಗಳೂರು, ಫೆ.26-ನಮ್ಮ ತಂದೆಯವರ ಹೆಸರಿನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿರುವುದಲ್ಲದೆ, ತಂದೆಯವರ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿರುವುದಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದು ಡಾ.ರಾಜ್ಕುಮಾರ್ ಅವರ ಪುತ್ರ ಪುನೀತ್ರಾಜ್ಕುಮಾರ್ ಹೇಳಿದರು.
ಮಹಾಲಕ್ಷ್ಮಿ ಲೇಔಟ್ನ ನಾಗಪುರ ವಾರ್ಡ್ನಲ್ಲಿ ಇಂದು ಲೋಕಾರ್ಪಣೆಗೊಂಡ ಡಾ.ರಾಜ್ಕುಮಾರ್ ಒಳಾಂಗಣ ಕ್ರೀಡಾಂಗಣಕ್ಕೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅಪಾರ ಜನಸ್ತೋಮ ಕಂಡು ಪುಳಕಿತರಾಗಿ ಮಾತನಾಡಿದ ಅವರು, ನಮ್ಮ ತಂದೆಯವರ ಮೇಲೆ ಇಲ್ಲಿನ ಜನ ಅಭಿಮಾನವಿಟ್ಟು ಇಡೀ ರಾಜ್ಯದಲ್ಲೇ ಹೆಸರಾದ, ಅದ್ಭುತವಾದ ಕಂಚಿನ ಪ್ರತಿಮೆಯನ್ನು ಕುರುಬರಹಳ್ಳಿ ವೃತ್ತದಲ್ಲಿ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ನಿಮ್ಮೆಲ್ಲರ ಅಭಿಮಾನಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದು ಹೇಳಿದರು.
ನಿಮ್ಮ ಅಭಿಮಾನ, ಆಶೀರ್ವಾದ ನಮ್ಮ ಮೇಲೆ ಸದಾ ಹೀಗೇ ಇರಲಿ ಎಂದು ಪುನೀತ್ರಾಜ್ಕುಮಾರ್ ಹೇಳಿದರು.