ಶಿಲ್ಪಕಲೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ: ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್

ಬೆಂಗಳೂರು,ಫೆ.26-ಶಿಲ್ಪಕಲೆಯು ವಿಶ್ವದ ಜೀವಂತ ಕಲೆಯಾಗಿದ್ದು,ಇದನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಸಾಮಾಜಿಕ ಚಿಂತಕ ಚಿರಂಜೀವಿ ಸಿಂಗ್ ತಿಳಿಸಿದರು.

ಕನ್ನಡಭವನದ ನಯನ ಸಭಾಂಗಣದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಕಲಾವಿದರಾದ ಎನ್.ಪಿ.ಶ್ರೀನಿವಾಸ್ ಆಚಾರ್ಯ, ನಾಗೇಂದ್ರ ಶ್ಥಾಪತಿ, ನಾಡೋಜ ನಾಗಣ್ಣ ಮೋನಪ್ಪ ಬಡಿಗೇರಾ ಮತ್ತು ದತ್ತ ಹೀರಯ್ಯ ಶೇಠ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಎನ್.ಪಿ.ಶ್ರೀನಿವಾಸ ಆಚಾರ್ ಅವರ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಶಿಲ್ಪಕಲೆಗಳು ನಮ್ಮ ನಾಡಿನ ಇತಿಹಾಸವನ್ನು ಸಾರುತ್ತವೆ. ಈ ಕಲಾವಿದರ ಸಾಧನೆ ಅನನ್ಯವಾಗಿದ್ದು, ಪಾರಂಪರಾಗತ ಶೈಲಿಯ ಜೊತೆಗೆ ಜಾನಪದ ಶೈಲಿಯ ಅಂಶಗಳನ್ನು ಬೆರೆಸಿ ನೂತನ ರೀತಿಯಲ್ಲಿ ಕಲಾಕೃತಿಗಳನ್ನು ರಚಿಸುತ್ತಿದ್ದ ಅವರ ಕಲಾಕೌಶಲ್ಯ ಎಂಥವರನ್ನು ಮೆಚ್ಚಿಸುತ್ತದೆ ಎಂದರು.

ನಮ್ಮಲ್ಲಿ ಹೊಯ್ಸಳ ಶಿಲ್ಪಕಲೆಗಳು ಹೆಚ್ಚಾಗಿದ್ದು , ಚಾಣುಕ್ಯ ಶೈಲಿಯ ಶಿಲ್ಪಕಲೆಗಳು ಕಣ್ಮರೆಯಾಗುತ್ತಿದೆ. ಆದುದ್ದರಿಂದ ಶಿಲ್ಪಿಗಾರರು ಈ ಬಗ್ಗೆ ಹೆಚ್ಚು ಗಮನನೀಡಬೇಕೆಂದು ಸಲಹೆ ನೀಡಿದರು.

ಅಕಾಡೆಮಿ ಅಧ್ಯಕ್ಷ ಕಾಳಚಾರ್ ಮಾತನಾಡಿ, ಶಿಲ್ಪ ಕಲಾವಿದರು ನಾಡಿನ ಸಂಸ್ಕøತಿ, ಕಲೆ, ಇತಿಹಾಸದ ಜೀವಂತ ದಾಖಲಿಗರು. ಶ್ರದ್ಧೆ ಮತ್ತು ಸಮರ್ಪಣಾ ಭಾವ ಕಲಾವಿದರ ಮೂಲಕ ನಾಡಿನಲ್ಲಿ ಶೃಂಗಾರ ರಸಭಾವ ಶಾಂತಿ, ನೆಮ್ಮದಿ ಸಹಬಾಳ್ವೆಯನ್ನು ರೂಢಿಸುತ್ತದೆ ಎಂದರು.

ನಾಡೋಜ ಡಾ.ನಾಗಣ್ಣ ಮೊನಪ್ಪ ಬಡಿಗೇರಾ, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಗೊನ್ನಾಳ ಗ್ರಾಮದವರಾಗಿದ್ದು ಇವರು ಓದಿದ್ದು 2ನೇ ತರಗತಿ ಮಾತ್ರ. ನಿಂತರ ಶ್ರದ್ಧೆ, ಶ್ರಮ, ಸಾಧನೆಯಿಂದ ಹಂಪಿ ಕನ್ನಡ ವಿವಿಯ ಗೌರವ ಡಾಕ್ಟರೇಟ್ ಪದವಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅವರು ಆರಿಸಿಕೊಂಡು ಬಂದವು ಎಂದು ಸ್ಮರಿಸಿದರು.

ಶಿಲ್ಪ ಕಲಾವಿದರ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು. ಕಲಾ ವಿಮರ್ಶಕ ಡಾ. ಎಚ್.ಎಂ.ಕೃಷ್ಣಯ್ಯ, ಹಿರಿಯ ಕಲಾವಿದ ವೆಂಕಟ ಚಲಪತಿ, ಅಕಾಡೆಮಿ ರಿಜಿಸ್ಟರ್ ಇಂದ್ರಮ್ಮ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ