ನವದೆಹಲಿ:ಫೆ-೨೬: ಭಾರತೀಯ ಸೇನೆ ತನ್ನ ನೌಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಮತ್ತೆ ನಾಲ್ಕು ಯುದ್ಧನೌಕೆಗಳ ಖರೀದಿಗೆ ಅನುಮೋದನೆ ನೀಡಲಾಗಿದೆ.
ಮಾಸ್ಕೋ ಮತ್ತು ದೆಹಲಿ ನಡುವಿನ ಈ ಹಿಂದಿನ ಒಪ್ಪಂದ ಅಂತಿಮವಾಗಿದ್ದು, ಒಟ್ಟು 4 ಯುದ್ಧನೌಕಗೆಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಒಟ್ಟು 200 ಮಿಲಿಯನ್ ಮೊತ್ತದ 4 ನೌಕೆಗಳನ್ನು ಖರೀದಿ ಮಾಡಲಾಗುತ್ತಿದೆ. ಪ್ರತೀಯೊಂದು ನೌಕೆಗೂ ಸುಮಾರು 50 ಮಿಲಿಯನ್ ವೆಚ್ಚವಾಗಲಿದ್ದು, ಇಂತಹ 4 ನೌಕೆಗಳನ್ನು ಭಾರತ ಖರೀದಿ ಮಾಡಲು ನಿರ್ಧರಿಸಿದೆ. ಪ್ರಸ್ತುತ ನೌಕಾದಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ರಿವಾಕ್ 3 ಕ್ಲಾಸ್ ಯುದ್ಧ ನೌಕೆಯಂತಹ ನಾಲ್ಕು ಯುದ್ಧನೌಕೆಗಳನ್ನು ಭಾರತ ಖರೀದಿ ಮಾಡಿದೆ. ಈ ಪೈಕಿ ರಷ್ಯಾದ ಕಲಿಂಗ್ರಾಡ್ ನಲ್ಲಿರುವ ಯಾಂಟರ್ ಶಿಪ್ ಯಾರ್ಡ್ 2 ಯುದ್ಧನೌಕೆಗಳು ನಿರ್ಮಾಣನವಾಗಲಿದ್ದು, ಮತ್ತೆರಡು ನೌಕೆಗಳು ಗೋವಾದ ಶಿಪ್ ಯಾರ್ಡ್ ಲಿಮಿಟೆಡ್ ನಲ್ಲಿ ನಿರ್ಮಾಣವಾಗಲಿದೆ. ಈ ಯುದ್ಧ ನೌಕೆಯ ಸಂಪೂರ್ಣ ತಂತ್ರಜ್ಞಾನ ರಷ್ಯಾದ ಯಾಂಟಪ್ ಲಿಮಿಟೆಡ್ ನದ್ದಾಗಿದೆ.
ಈ ಬಗ್ಗೆ ಮಾತನಾಡಿರುವ ನೌಕಾಧಿಕಾರಿ ಅಜಯ್ ಶುಕ್ಲಾ, ಭಾರತೀಯ ಸೇನೆಗೆ ಒಟ್ಟು 24 ನೌಕೆಗಳ ಅವಶ್ಯಕತೆ ಇದ್ದು, ಪ್ರಸ್ತುತ ನಮ್ಮ ಬಳಿ 10 ನೌಕೆಗಳು ಮಾತ್ರ ಇವೆ ಎಂದು ಹೇಳಿದ್ದಾರೆ.
2003ರ ಜೂನ್, ಏಪ್ರಿಲ್ 2014, 2012ರ ಏಪ್ರಿಲ್ ನಲ್ಲಿ ಮೂರು ನೌಕೆ ಮತ್ತು 2013ರ ಜೂನ್ ನಲ್ಲಿ ಒಂದು ನೌಕೆಯನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಇನ್ನೂ 4 ಯುದ್ಧನೌಕೆಗಳು 2019ರ ಅಂತ್ಯದೊಳಗೆ ಭಾರತೀಯ ಸೇನೆ ಸೇರ್ಪಡೆಗೊಳ್ಳಲಿದೆ. ಆ ಮೂಲಕ ಭಾರತದ ಯುದ್ಧನೌಕೆಗಳ ಸಾಮರ್ಥ್ಯ 14ಕ್ಕೆ ಏರಿಕೆಯಾಗಲಿದೆ.