ರಾಂಚಿ, ಫೆ.26- ನಕ್ಸಲ್ ಹಾವಳಿ ಪೀಡಿತ ಜಾರ್ಖಂಡ್ನ ಪಲಮು ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳೆಯರೂ ಸೇರಿದಂತೆ ನಾಲ್ವರು ನಕ್ಸಲರು ಹತರಾಗಿದ್ದಾರೆ.
ಪಲಮು ಜಿಲ್ಲೆಯ ಲಾಲ್ಘಾಟಿ-ನೌದಿಹಾ ಪ್ರದೇಶದಲ್ಲಿ ಬೆಳಗ್ಗೆ 8.30ರಲ್ಲಿ ಈ ಘಟನೆ ನಡೆದಿದೆ ಎಂದು ಪೋಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರೀಯ ಮೀಸಲು ಪೋಲೀಸ್ ಪಡೆ(ಸಿಆರ್ಪಿಎಫ್)ಯ 134ನೇ ಬೆಟಾಲಿಯನ್ ಮತ್ತು ರಾಜ್ಯ ಪೋಲೀಸ್ ವಿಭಾಗದ ಜಂಟಿ ತಂಡ ಮಾವೋವಾದಿ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಭದ್ರತಾ ಪಡೆ ಮೇಲೆ ನಕ್ಸಲರು ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಇಬ್ಬರು ಮಹಿಳೆಯರೂ ಸೇರಿದಂತೆ ನಾಲ್ವರು ಬಂಡುಕೋರರು ಕೊಲ್ಲಲ್ಪಟ್ಟರು.
ಹತರಾದ ನಕ್ಸಲರಿಂದ ಎರಡು ಸ್ವಯಂ-ಲೋಡಿಂಗ್ ರೈಫಲ್ಗಳು(ಎಸ್ಎಲ್ಆರ್ಗಳು) ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.