
ನವದೆಹಲಿ, ಫೆ.25- ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೀನಿ ಪ್ರಜೆಯೊಬ್ಬರನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು ಆತ ಕಳ್ಳಸಾಗಣೆ ಮಾಡುತ್ತಿದ್ದ 92 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾಂಕಾಂಗ್‍ನಿಂದ ದೆಹಲಿಗೆ ಬಂದ ಆತನನ್ನು ಸಂಶಯದ ಮೇರೆಗೆ ಸೀಮಾಸುಂಕ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಮೂರು ಕೆಜಿ ತೂಕದ ಮೂರು ಚಿನ್ನದ ಗಟ್ಟಿಗಳು ಆತನ ಪ್ಯಾಂಟ್‍ನಲ್ಲಿ ಪತ್ತೆಯಾದವು. ಇವನ್ನು ಕಳವು ಮಾಡಲು ಆತ ಜೀನ್ಸ್‍ಪ್ಯಾಂಟ್‍ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದು ಪತ್ತೆಯಾಗಿದೆ.
ತಿಂಗಳ ಆರಂಭದಲ್ಲಿ ದೆಹಲಿ ಪೆÇಲೀಸರು ನಾಲ್ವರು ಚೀನೀಯರನ್ನು ಬಂಧಿಸಿ 10 ಕೆಜಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರು.