![bus-lorry-accident](http://kannada.vartamitra.com/wp-content/uploads/2018/02/bus-lorry-accident-e1519485661565.jpg)
ವಿಜಯಪುರ, ಫೆ.25-ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಮಹಿಳಾ ಕಾನ್ಸ್ಟೆಬಲ್ಗಳು ಸೇರಿದಂತೆ 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬಬಲೇಶ್ವರ ಬಳಿ ನಡೆದಿದೆ.
ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಾಹುಲ್ ಗಾಂಧಿ ಸಮಾವೇಶದ ಹಿನ್ನೆಲೆಯಲ್ಲಿ ಭದ್ರತೆಗಾಗಿ ಪೊಲೀಸರು ಸರ್ಕಾರಿ ಬಸ್ನಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ವಿಜಯಪುರದಿಂದ ಜಮಖಂಡಿಗೆ ತೆರಳುತ್ತಿದ್ದ ವೇಳೆ ಬಬಲೇಶ್ವರ ಬಳಿ ಲಾರಿಯೊಂದು ಬಸ್ಗೆ ಡಿಕ್ಕಿ ಹೊಡೆದಿದೆ. ಚಿಕ್ಕಪಡಸಲಗಿಯಲ್ಲಿ ನಡೆಯಲಿರುವ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ನಿಯೋಜನೆಗೊಂಡಿದ್ದ ಪೊಲೀಸರು ಬಸ್ನಲ್ಲಿ ತೆರಳುತ್ತಿದ್ದರು.