ಬೆಂಗಳೂರು: 1963ರ ಆಗಸ್ಟ್ 13ರಂದು ತಮಿಳು ಮೂಲದ ಅಯ್ಯಪ್ಪನ್ ಮತ್ತು ತೆಲುಗು ಮೂಲದ ರಾಜೇಶ್ವರಿ ಪುತ್ರಿಯಾಗಿ ಶಿವಕಾಶಿಯಲ್ಲಿ ಜನಿಸಿದ ಶ್ರೀದೇವಿ ನಾಲ್ಕನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದ್ದು, 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ಶ್ರೀದೇವಿ ಅವರ ಮೂಲ ಹೆಸರು ಶ್ರೀ ಅಮ್ಮಾ ಯಾಂಗರ್ ಅಯ್ಯಪ್ಪನ್. ‘ತುನಾಯಿವನ್’ ತಮಿಳು ಚಿತ್ರದಲ್ಲಿ ಬಾಲ ಮುರುಗ ಆಗಿ ನಟಿಸಿದ್ದ ಶ್ರೀದೇವಿ ಅಂದಿನಿಂದಲೇ ತೆರೆಯ ಮೇಲೆ ಪ್ರಭುತ್ವ ಸಾಧಿಸುತ್ತ ಬಂದವರು. 2013ರಲ್ಲಿ ಇವರು ‘ಪದ್ಮಶ್ರೀ’ ಗೆ ಭಾಜನರಾಗಿದ್ದರು.
ಡಾ. ರಾಜ್ ಕುಮಾರ್, ಅಂಬರೀಷ್ ಸೇರಿದಂತೆ ಕನ್ನಡದ ಚಿತ್ರಗಳಲ್ಲೂ ನಟಿಸಿರುವ ಶ್ರೀದೇವಿ ಅವರು ತಮಿಳು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ನಟಿಸಿದ್ದು, ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್ ಆಗಿ ಮೆರೆದರು. ‘ಮಿಸ್ಟರ್ ಇಂಡಿಯಾ’ ದಲ್ಲಿ ಮಿಂಚಿದ್ದ ಶ್ರೀದೇವಿ ಅವರು ಇತ್ತೀಚೆಗೆ ನಟಿಸಿದ ಚಿತ್ರ ‘ ಝೀರೊ’.
1979ರಲ್ಲಿ ಬಾಲಿವುಡ್‌ನಲ್ಲಿ ಮೊದಲ ಚಿತ್ರ ‘ಸೋಲ್ವಾ ಸಾವನ್’ನಲ್ಲಿ ಅಭಿನಯಿಸಿದ್ದರು. ‘ಜಗದೇಕ ವೀರುಡು’ ಚಿತ್ರದಲ್ಲಿ ಚಿರಂಜೀವಿ ಜತೆ ಮೊಟ್ಟಮೊದಲ ಬಾರಿ ಅಭಿನಯಿಸಿದ್ದ ಅತಿಲೋಕ ಸುಂದರಿ ಶ್ರೀದೇವಿ.
ಮಲಯಾಳಂನ 26, ರಾಜ್‌ಕುಮಾರ್ ಅವರ ಜತೆ ‘ಭಕ್ತ ಕುಂಬಾರ’ ಸೇರಿದಂತೆ ಆರು ಕನ್ನಡ ಚಿತ್ರ, 76 ತಮಿಳು, 74 ತೆಲುಗು, 71 ಹಿಂದಿ ಚಿತ್ರಗಳಲ್ಲಿ ಶ್ರೀದೇವಿ ಅಭಿನಯಿಸಿದ್ದಾರೆ.