ಬಂಗಾರಪೇಟೆ, ಫೆ.24- ನನ್ನನ್ನು ಪ್ರಶ್ನೆ ಕೇಳಬೇಕು ಎಂದರೆ ನಿಮಗೆ ಧೈರ್ಯ ಇರಬೇಕು ಎಂದು ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ಧನೆಡ್ಡಿ ಪತ್ರಕರ್ತರಿಗೆ ಸೂಚಿಸಿದ ಪ್ರಸಂಗ ನಡೆಯಿತು.
ಪಟ್ಟಣದ ಶಾಂತಿನಗರ ಬಡಾವಣೆಯ ಪಾರ್ಕ್ನಲ್ಲಿ ಸ್ವಾತಂತ್ರ್ಯ ಸೇನಾನಿ ಆಜಾದ್ ಚಂದ್ರಶೇಖರ್ ಪ್ರತಿಮೆ ಬಳಿ ವೀಕ್ಷಣೆಗೆ ಆಗಮಿಸಿದ್ದ ಸಂದರ್ಭದಲ್ಲಿ ನಿಮ್ಮ ಬೆಂಬಲಿಗರಾದ ಸುರೇಶ್ಬಾಬು, ಆನಂದ್ ಸಿಂಗ್ ಅವರು ಕಾಂಗ್ರೆಸ್ಗೆ ಸೇರ್ಪಡೆ ಆಗಿರುವ ಹಿನ್ನಲೆಯಲ್ಲಿ ಪರೋಕ್ಷವಾಗಿ ಕಾಂಗ್ರೆಸ್ಗೆ ಬೆಂಬಲ ನೀಡಲಾಗುತ್ತಿದೆ ಎಂಬ ವದಂತಿ ಹಬ್ಬಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ , ಇಂತಹ ಸ್ಥಳದಲ್ಲಿ ಇಂತಹ ಪ್ರಶ್ನೆಗಳು ಕೇಳುವುದು ಬಹಳ ಬುದ್ಧಿಹೀನ ಕೆಲಸ. ಇಂತಹ ಪ್ರಶ್ನೆ ಕೇಳಲಿಕ್ಕೆ ಧೈರ್ಯನೂ ಮಾಡಬಾರದು ಎಂದರು.
ಇಂತಹ ಗಾಳಿ ಸುದ್ದಿ ಬಗ್ಗೆ ತಮ್ಮ ಸ್ಪಷ್ಟೀಕರಣಕ್ಕಾಗಿ ಕೇಳಲಾಗಿದೆ ಎಂದು ಮತ್ತೆ ಸುದ್ದಿಗಾರರು ಹೇಳಿದಾಗ, ನನ್ನ ಪ್ರಾಣ ಹೋದರೂ ಆಕಡೆ ಹೋಗೋದಿಲ್ಲ ಎಂದು ಸ್ಪಷ್ಟಪಡಿಸಿದ ರೆಡ್ಡಿ, ನೀವು ಆ ಯೋಚನೇನೂ ಮಾಡಬಾರದು. ನೀವು ಕೇಳಲೂ ಬಾರದು. ನನ್ನ ಎದುರಿಗೆ ಕೇಳುವ ಧೈರ್ಯನೂ ಮಾಡಬಾರದಾಗಿತ್ತು ಎಂದರು.
ನನ್ನನ್ನು ರಾಜಕೀಯವಾಗಿ ಮುಗಿಸಲು ಪಿತೂರಿ ನಡೆಸಿದ್ದ ಕಾಂಗ್ರೆಸ್ ಪಕ್ಷವನ್ನು ಹೇಗೆ ಸೇರಲಿ. ಕಾಂಗ್ರೆಸ್ ಸೇರುವ ಬಗ್ಗೆ ಕನಸಲ್ಲೂ ಯೋಚನೆ ಮಾಡುವುದಿಲ್ಲ. ಇಂತಹ ಪ್ರಶ್ನೆಯನ್ನು ನನ್ನನ್ನು ಕೇಳಳು ನಿಮಗೆ ದೈರ್ಯಬೇಕು ಎಂದು ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡರು.
ಜಿಲ್ಲಾ ವಿಹೆಚ್ಪಿ ಅಧ್ಯಕ್ಷ ರಘುರಾಮರೆಡ್ಡಿ, ಸಾಫ್ಟ್ವೇರ್ ಜನಾರ್ಧನರೆಡ್ಡಿ, ಒಂಬತ್ತುಗುಳಿ ವೆಂಕಟೇಶ್ರೆಡ್ಡಿ, ಗೋಲ್ಡ್ ಮಂಜುನಾಥರೆಡ್ಡಿ. ಜಿಪಂ ಸದಸ್ಯ ಮಹೇಶ್, ಶಾಂತಿನಗರ ಮಂಜುನಾಥ್ ಇದ್ದರು.