ಬೆಳಗಾವಿ, ಫೆ.24- ಕಾಂಗ್ರೆಸ್ ಪಕ್ಷದಲ್ಲೀಗ ಚಟುವಟಿಕೆಗಳು ಬಿರುಸುಗೊಂಡಿವೆ. ಎಲ್ಲೆಡೆ ನಾಯಕರು, ಕಾರ್ಯಕರ್ತರು ಪಾದರಸದಂತೆ ಸಂಚಲನ ಮಾಡುತ್ತಿದ್ದಾರೆ. ಪಕ್ಷದಲ್ಲಿ ಸಾಂಘಿಕ ಹೋರಾಟಕ್ಕೆ ಪಣತೊಟ್ಟಿದ್ದಾರೆ. ಕಾರ್ಯಕರ್ತರ ಪಡೆ ವಿಧಾಸಭೆ ಚುನಾವಣೆಗೆ ಸಜ್ಜಾಗಿದ್ದಾರೆ. ಒಟ್ಟಾರೆ ಮುಂಬೈ ಕರ್ನಾಟಕದಲ್ಲಿ ಈಗ ರಾಹುಲ್ ನೇತೃತ್ವದಲ್ಲಿ ಚುನಾವಣಾ ರಣಕಹಳೆ ಮೊಳಗಿತು.
ಜನಾಶೀರ್ವಾದ ಪಡೆದು ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ಮುಂಬೈ ಕರ್ನಾಟಕಕ್ಕೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ಹೈದರಾಬಾದ್ ಕರ್ನಾಟಕದಲ್ಲಿ ಸಂಘಟಿಸಿದ್ದ ಮೊದಲ ಹಂತದ ರಾಹುಲ್ಗಾಂಧಿ ಜನಾಶೀರ್ವಾದ ಯಾತ್ರೆಗೆ ಅಪಾರ ಜನಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲೀಗ ಸಂತಸದ ಹೊನಲು ಹರಿದಿದೆ.
ಈಗ ಅದರ ಮುಂದುವರೆದ ಭಾಗವಾಗಿ ರಾಹುಲ್ಯಾತ್ರೆ ಚಿಕ್ಕೋಡಿಯಿಂದ ಆರಂಭವಾಯಿತು. ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಳಗಾವಿ ನಗರದ ಸಾಂಬ್ರ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ಗಾಂಧಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅದ್ಧೂರಿ ಸ್ವಾಗತ ಕೋರಿದರು.
ನಂತರ ಹೆಲಿಕಾಫ್ಟರ್ ಮೂಲಕ ರಾಹುಲ್ಗಾಂಧಿ ಅಥಣಿ ಹೊರವಲಯದ ಕರಿಮಸುತಿ ಗ್ರಾಮದಲ್ಲಿ ಆಯೋಜಿಸಿರುವ ಬೃಹತ್ ಸಾರ್ವಜನಿಕ ಸಮಾವೇಶ ನಡೆಯುವ ಸ್ಥಳಕ್ಕೆ ತೆರಳಿದರು.
ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಜಿಲ್ಲೆಗಳು ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದವು. ಬದಲಾದ ರಾಜಕೀಯ ಸ್ಥಿತಿಯಲ್ಲಿ ಈ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ನಂತರ ಕಳೆದ ಬಾರಿ ಬಿಜೆಪಿ-ಕೆಜೆಪಿ ವಿಭಜನೆ ಲಾಭ ಪಡೆದ ಕಾಂಗ್ರೆಸ್ ಈ ಕ್ಷೇತ್ರಗಳಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿತ್ತು.
ಈ ಪಾರುಪತ್ಯವನ್ನು ಮುಂದುವರೆಸಿ ಮತ್ತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪಿಸಿ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣುತ್ತಿರುವ ಬಿಜೆಪಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ರಾಹುಲ್ಯಾತ್ರೆಯನ್ನು ಆಯೋಜಿಸಲಾಗಿತ್ತು.
ಈ ಸಾರ್ವಜನಿಕ ಸಭೆಗೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ವಿವಿಧ ಜಿಲೆÉ್ಲಗಳಿಂದ ಸುಮಾರು 2ಸಾವಿರ ಬಸ್ಗಳಿಂದ ಜನ ಆಗಮಿಸಿದ್ದಲ್ಲದೆ, ಟೆಂಪೆÇೀ, ಲಾರಿ, ವಿವಿಧ ವಾಹನಗಳಲ್ಲಿ ಜನ ಆಗಮಿಸಿದ್ದರು.
ಸಾರ್ವಜನಿಕ ಸಭೆಯಲ್ಲಿ ರಾಹುಲ್ಗಾಂಧಿ ಜಿಎಸ್ಟಿ, ನೋಟು ನಿಷೇಧದಿಂದ ಸಾರ್ವಜನಿಕರು ಅನುಭವಿಸಿದ ತೊಂದರೆಗಳನ್ನು ಪುರುಚ್ಚರಿಸಿದ ಅವರು, ಸಾವಿರಾರು ಕೋಟಿಗಳನ್ನು ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿರುವ ಉದ್ಯಮಿಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವ ಸರ್ಕಾರದ ನಿರ್ಲಕ್ಷ್ಯ ಕ್ರಮವನ್ನು ಖಂಡಿಸಿದರು.
ಅಮಾಯಕ ರೈತರ ಸಾಲ ಮನ್ನಾ ಮಾಡದ ಕೇಂದ್ರ ಸರ್ಕಾರ ಉದ್ಯಮಿಗಳ ಲಕ್ಷಾಂತರ ಕೋಟಿ ಸಾಲ ಮನ್ನ ಮಾಡಿದೆ ಎಂದು ಗಂಭೀರ ಆರೋಪ ಮಾಡಿದರು. ರಾಜ್ಯ ಸರ್ಕಾರದ ಹಲವು ಭಾಗ್ಯಗಳನ್ನೂ ಕುರಿತು ಪ್ರಸ್ತಾಪಿದರು.
ಅಧಿಕೃತವಾಗಿ ರಾಹುಲ್ವೇಳಾ ಪಟ್ಟಿಯಲ್ಲಿ ದೇವಾಲಯ, ಮಠಮಾನ್ಯಗಳ ಭೇಟಿ ಪ್ರಸ್ತಾಪ ಇಲ್ಲದಿದ್ದರೂ ಸವದತ್ತಿಯ ಯಲ್ಲಮ್ಮ ದೇವಸ್ಥಾನ, ವಿಜಯಪುರದ ದರ್ಗಾ, ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಅಜ್ಜನವರ ಗದ್ದುಗೆ, ಇಂಡಿಪಂಥನ ಪತೇಶ ದರ್ಗಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.
ಮಧ್ಯಾಹ್ನ ಅಥಣಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದು, ಬಳಿಕ ವಿಜಯಪುರದಲ್ಲಿ ತ್ರಿಕೋಟದಲ್ಲಿ ಆಯೋಜಿಸಿರುವ ಸ್ತ್ರೀಶಕ್ತಿ ಸಮಾವೇಶನದಲ್ಲಿ ರಾಹುಲ್ಗಾಂಧಿ ಪಾಲ್ಗೊಳ್ಳಲಿದ್ದಾರೆ. ನಂತರ ಚಿಕ್ಕೋಡಿಯಲ್ಲಿ ಸಭೆ ನಡೆಸಲಿದ್ದಾರೆ.
ಬಿಜಾಪುರದವರೆಗೆ ಬಸ್ನಲ್ಲಿ ಸಂಚರಿಸಲಿರುವ ರಾಹುಲ್, ಪಕ್ಷದ ಪ್ರಮುಖರ ಜತೆ ಸಭೆ ನಡೆಸಲಿದ್ದಾರೆ. ನಾಳೆ ಬಾಗಲಕೋಟೆ ಜಿಲ್ಲೆ ಜಮಖಂಡಿ ಬಳಿ ನೀರು ತುಂಬಿರುವ ಬ್ಯಾರೆಜ್ ಬಳಿ ಸಂಭ್ರಮಾಚರಣೆ, ವಿಜಯಪುರ ಜಿಲ್ಲೆ ಮುಳವಾಡಕ್ಕೆ ಭೇಟಿ ನೀಡಲಿದ್ದಾರೆ. ಮುಧೋಳದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೋಳ್ಳಲಿದ್ದಾರೆ.
ನಾಡಿದ್ದು ಬಾಗಲಕೋಟೆ, ವಿಜಯಪುರ ಮುಖಂಡರೊಂದಿಗೆ ಸಭೆ ನಡೆಸಿ ರಾಮದುರ್ಗ, ಸವದತ್ತಿಯಲ್ಲಿ ಕಾರ್ನರ್ ಸಭೆ, ಧಾರವಾಡ ಮೂಲಕ ಹುಬ್ಬಳ್ಳಿಗೆ ತೆರಳಿ ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ದೆಹಲಿಗೆ ಹಿಂದಿರುಗಲಿದ್ದಾರೆ.
ಕಟೌಟ್ಗಳ ಅಬ್ಬರ: ಸಂಚಾರಕ್ಕೆ ಅಡಚಣೆ:
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಮುಖಂಡರು ರಸ್ತೆಯುದ್ದಕ್ಕೂ ಅಳವಡಿಸಿದ್ದ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಕಟೌಟ್ಗಳಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.
ಅಥಣಿ ಹೊರವಲಯದ ಕರಿಮಸತಿ ಗ್ರಾಮದ ಬಳಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯ ಮಾರ್ಗದುದ್ದಕ್ಕೂ ಬೃಹತ್ ಪ್ರಮಾಣದ ಕಟೌಟ್, ಬಂಟಿಂಗ್ಸ್ , ಬ್ಯಾನರ್ಗಳನ್ನು ಕಟ್ಟಲಾಗಿದ್ದು, ಸಮಾರಂಭಕ್ಕೆ ಭಾರೀ ಪ್ರಮಾಣದಲ್ಲಿ ವಾಹನಗಳು ಬಂದಿದ್ದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿ ವಾಹನ ದಟ್ಟಣೆ ಕಡಿಮೆ ಮಾಡಲು ಪೆÇಲೀಸರು ಹರಸಾಹಸ ಪಡಬೇಕಾಯಿತು.