ನವದೆಹಲಿ,ಫೆ.24- ವಾಮಾಚಾರದ ಪ್ರಭಾವಕಕ್ಕೊಳಗಾದ ತಾಯಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಪಶ್ಚಿಮ ದೆಹಲಿಯ ಮೋತಿ ನಗರದಲ್ಲಿ ನಡೆದಿದೆ.
ಸುಮನಾ ತನ್ನ ಮಕ್ಕಳಾದ ನಂದಿನಿ ಹಾಗೂ ಆಕಾಂಕ್ಷ(ಆರು ತಿಂಗಳ ಮಗು)ರನ್ನು ಕೊಲೆ ಮಾಡಿರುವ ಮಹಿಳೆಯಾಗಿದ್ದಾಳೆ.
ಇತ್ತೀಚಿಗೆ ಮಾಂತ್ರಿಕರೊಬ್ಬರ ಮಾಂತ್ರಿಕರ ಬಳಿ ಹೋಗಿ ಬಂದಾಗಿನಿಂದ ಪತ್ನಿ ವಿಚಿತ್ರವಾಗಿ ವರ್ತಿಸುತ್ತಿದ್ದು, ಆಕೆ ವಮಾಚಾರದ ಪ್ರಭಾವಕ್ಕೊಳಗಾಗಿ ಮಕ್ಕಳನ್ನು ಸಾಯಿಸಿರಬೇಕು ಎಂದು ಪತಿ ಹೇಳಿಕೊಂಡಿದ್ದಾರೆ.
ಆರೋಪಿ ಸುಮನಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಕೆ ಮಾನಸಿಕ ಅಸ್ವಸ್ಥೆಯಾಗಿರುವ ಸಾಧ್ಯತೆ ಇದೆ ಎಂದು ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.