ಮುಂಬಯಿ,ಫೆ.24- ಶಿವಸೇನೆ ಜೊತೆ ಮೈತ್ರಿ ಇಲ್ಲದೇ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ಬಿಜೆಪಿ ಸಿದ್ಧವಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಚಾನೆಲïವೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫಡ್ನವೀಸ್, ಎರಡು ಪಕ್ಷಗಳು ಒಟ್ಟಿಗೆ ಅಥವಾ ಏಕಾಂಗಿಯಾಗಿ ಸ್ಪರ್ದಿಸಲು ಪಕ್ಷ ಸಿದ್ದವಿದೆ ಎಂದು ಹೇಳಿದ್ದಾರೆ.
ಎರಡು ಪಕ್ಷಗಳು ಒಟ್ಟಿಗೆ ಸ್ಪರ್ಧಿಸಲು ಬಿಜೆಪಿ ಬಯಸುತ್ತದೆ. ಶಿವಸೇನೆ ಪಕ್ಷದ ಯಾರೋ ಒಬ್ಬರ ಹೇಳಿಕೆಯನ್ನು ನಾನು ಕೇಳುವುದಿಲ್ಲ, ಇದು ಕೇವಲ ಒಬ್ಬರು ತೆಗೆದುಕೊಳ್ಳುವ ನಿರ್ಧಾರವಲ್ಲ, ಉದ್ಧವ್ ಜೊತೆ ನನಗೆ ಉತ್ತಮ ಸಂಬಂಧವಿದೆ ಎಂದು ತಿಳಿಸಿದ್ದಾರೆ.