ಮುಂಬೈ/ನವದೆಹಲಿ, ಫೆ.24- ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್ಬಿ) 11,400 ಕೋಟಿ ರೂ.ಗಳ ವಂಚನೆ ಪ್ರಕರಣದ ಪ್ರಮುಖ ಸೂತ್ರಧಾರರಾದ ಡೈಮಂಡ್ ಮರ್ಚೆಂಟ್ ನೀರವ್ ಮೋದಿಗೆ ಸೇರಿದ ಆಸ್ತಿಗಳ ಜಪ್ತಿಯನ್ನು ಮುಂದುವರಿಸಿರುವ ಜಾರಿ ನಿರ್ದೇಶನಾಲಯ ಇಂದು 523 ಕೋಟಿ ರೂ. ಮೌಲ್ಯದ 21 ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಅಕ್ರಮ ವ್ಯವಹಾರ ಮತ್ತು ಹಣ ದುರ್ಬಳಕೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಇಡಿ ಅಧಿಕಾರಿಗಳು ತೋಟದ ಮನೆಗಳು, ಫ್ಲಾಟ್ಗಳು, ಅಪಾರ್ಟ್ಮೆಂಟ್ಗಳೂ ಸೇರಿದಂತೆ ನೀರವ್ ಮೋದಿ ಗ್ರೂಪ್ಗೆ ಸೇರಿದ 21 ಆಸ್ತಿ-ಪಾಸ್ತಿಗಳನ್ನು ವಶಪಡಿಸಿಕೊಂಡಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇಡಿ ಅಧಿಕಾರಿಗಳು ನೀರವ್ ಮೋದಿಗೆ ಸೇರಿದ 44 ಕೋಟಿ ರೂ. ಮೌಲ್ಯದ ಷೇರುಗಳು ಮತ್ತು ಬ್ಯಾಂಕ್ ಖಾತೆಗಳನ್ನು ಇಡಿ ಅಧಿಕಾರಿಗಳು ನಿನ್ನೆಯಷ್ಟೇ ಜಪ್ತಿ ಮಾಡಿದ್ದರು. ಅಲ್ಲದೇ ನೂರಕ್ಕೂ ಹೆಚ್ಚು ದುಬಾರಿ ವಿದೇಶಿ ವಾಚುಗಳ ಬೃಹತ್ ಸಂಗ್ರಹವನ್ನೂ ಮುಟ್ಟುಗೋಲು ಹಾಕಿಕೊಂಡಿದ್ದರು.
ಮೊನ್ನೆ ನೀರವ್ ಮತ್ತು ಮೆಹುಲ್ ಚೋಕ್ಸಿ ಗ್ರೂಪ್ಗೆ ಸೇರಿದ 94.52 ಕೋಟಿ ರೂ. ಮೌಲ್ಯದ ಷೇರುಗಳು ಮತ್ತು ಮ್ಯೂಚುವಲ್ ಫಂಡ್ಗಳನ್ನು ಜಪ್ತಿ ಮಾಡಿದ್ದರು. ಅಲ್ಲದೇ ನೀರವ್ ಕಂಪನಿಗೆ ಸೇರಿದ 100 ಕೋಟಿ ರೂ. ಬೆಲೆಬಾಳುವ 9 ಐಷಾರಾಮಿ ಕಾರುಗಳನ್ನೂ ಸಹ ವಶಪಡಿಸಿಕೊಂಡಿದ್ದರು.