ರಖೈನ್, ಫೆ.24-ಕೋಮುಗಲಭೆ ಮತ್ತು ಹಿಂಸಾಚಾರದಿಂದ ತತ್ತರಿಸಿದ ಮ್ಯಾನ್ಮಾರ್ನ ರಖೈನ್ ರಾಜ್ಯದಲ್ಲಿ ಸರ್ಕಾರಿ ಕಚೇರಿಗಳು ಮತ್ತು ಇತರ ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ನಡೆದ ಬಾಂಬ್ ದಾಳಿಗಳಲ್ಲಿ ಹಲವರು ಗಾಯಗೊಂಡಿದ್ದಾರೆ.
ರಖೈನ್ ರಾಜ್ಯದ ರಾಜ್ಯಧಾನಿ ಸಿಟ್ವಿಯಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಬಾಂಬ್ಗಳಲ್ಲಿ ಮೂರು ಸ್ಫೋಟಗೊಂಡಿವೆ. ಸ್ಫೋಟಗೊಳ್ಳದ ಮೂರು ಸ್ಫೋಟಕ ಸಾಧನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸರ್ಕಾರದ ಪ್ರಮುಖ ಕಚೇರಿ ಮುಂಭಾಗ ಬಾಂಬ್ ಸ್ಫೋಟಗೊಂಡ ಪ್ರಕರಣದಲ್ಲಿ ಕೆಲವರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಬಾಂಬ್ ಸ್ಫೋಟಗಳು ಮತ್ತು ಸ್ಫೋಟಕ ಸಾಧನಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸಿಟ್ವಿ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತಷ್ಟು ಬಾಂಬ್ಗಳಿಗೆ ತೀವ್ರ ಶೋಧ ಮುಂದುವರಿಸಿದೆ.
ಸಿಟ್ವಿ ಸೇರಿದಂತೆ ರಖೈನ್ ರಾಜ್ಯದ ಅನೇಕ ಪ್ರಾಂತ್ಯಗಳಲ್ಲಿ ಇತ್ತೀಚೆಗೆ ಕೋಮು ಗಲಭೆ ಮತ್ತು ಹಿಂಚಾಚಾರ ಭುಗಿಲೆದ್ದು ಲP್ಷÁಂತರ ರೋಹಿಂಗ್ಯಾ ಮುಸ್ಲಿಮರ ಪಲಾಯನವಾಗಿದ್ದರು.