ಭುವನೇಶ್ವರ, ಫೆ.24- ಉಡುಗೊರೆ ಬಾಂಬ್ ಸ್ಫೋಟಗೊಂಡ ಪರಿಣಾಮ ಮದುಮಗ ಮತ್ತು ಆತನ ಅಜ್ಜಿ ಸಾವನ್ನಪ್ಪಿರುವ ಘಟನೆ ಒಡಿಶಾದ ಬೊಲಂಗೀರ್ ಜಿಲ್ಲೆಯ ಪಾಟ್ನಾಗರ್ನಲ್ಲಿ ನಡೆದಿದೆ.
ಘಟನೆಯಲ್ಲಿ ವಧು ಕೂಡ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಸೌಮ್ಯಾ ಶೇಖರ್ ಸಾಹು ಮತ್ತು ರೀನಾ ಫೆ.18ರಂದು ವಿವಾಹವಾಗಿದ್ದರು. ಫೆ.21ರಂದು ಆರತಕ್ಷತೆ ವೇಳೆ ಅಪರಿಚಿತನೊಬ್ಬ ಉಡುಗೊರೆ ತಂದುಕೊಟ್ಟಿದ್ದ.
ಐದು ದಿನಗಳ ನಂತರ ವಧು-ವರರು ಉಡುಗೊರೆ ಪ್ಯಾಕೇಟ್ ತೆರೆಯುತ್ತಿದ್ದರು. ಈ ವೇಳೆ ಬಾಕ್ಸ್ ತೆರೆಯುತ್ತಲೇ ಅದು ಸ್ಫೋಟಗೊಂಡು ಸುತ್ತಮುತ್ತ ಇದ್ದವರೆಲ್ಲ ಗಾಯಗೊಂಡರು. ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.