ಇಟಾನಗರ್, ಫೆ.24-ಭಾರತ-ಚೀನಾ ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿ ನೆಲೆಗೊಂಡಿರುವಾಗಲೇ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ಕಮ್ಲೆ ಜಿಲ್ಲೆಯ ಗ್ರಾಮವೊಂದರಲ್ಲಿ ಚೀನಿ ಮೂಲದ ನಿಗೂಢ ಸಾಧನವೊಂದು ಪತ್ತೆಯಾಗಿ ಆತಂಕ ಸೃಷ್ಟಿಸಿತು.
ಅರುಣಾಚಲ ಪ್ರದೇಶದಲ್ಲಿ ಚೀನಾ ಗಡಿಯಿಂದ 100 ಕಿ.ಮೀ. ದೂರದಲ್ಲಿರುವ ಗ್ರಾಮದಲ್ಲಿ ಮ್ಯಾಂಡರಿನ್ ಅಕ್ಷರಗಳು(ಚೀನಿ ಭಾಷೆ) ಇರುವ ಲ್ಯಾಪ್‍ಟಾಪ್ ಗಾತ್ರದ ಸಾಧನವೊಂದು ನಿರ್ಜನ ಪ್ರದೇಶದಲ್ಲಿ ಗ್ರಾಮಸ್ಥರಿಗೆ ಪತ್ತೆಯಾಯಿತು. ಸುದ್ದಿ ತಿಳಿದ ಕೂಡಲೇ ಪೆÇಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ನಂತರ ಈ ಸಾಧನವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಇದು ಚೀನಾದ ವೈಮಾನಿಕ ಕಣ್ಗಾವಲು ಸಾಧನೆ ಅಥವಾ ಅತಿ ಎತ್ತರದ ವಾತಾವರಣ ಅಧ್ಯಯನ ಉಪಕರಣ ಇರಬಹುದು ಎಂದು ತಿಳಿಸಿದ್ದಾರೆ.
ಈ ಸಾಧನದ ಮೂಲ ಮತ್ತು ಇದರ ಹಿಂದಿನ ಉದ್ದೇಶದ ಬಗ್ಗೆ ತನಿಖೆ ಮುಂದುವರಿದಿದೆ.