ಹೈದರಾಬಾದ್, ಫೆ.23-ಇಲ್ಲಿನ ಔಷಧಿ ತಯಾರಕ ಘಟಕದಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ 10ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ.
ಜೀಡಿಮೆಲ್ಟಾ ಪ್ರದೇಶದಲ್ಲಿರುವ ಫಾರ್ಮಾ ಘಟಕದಲ್ಲಿ ಇಂದು ಬೆಳಗ್ಗೆ 6.30ರಲ್ಲಿ ಬೆಂಕಿ ಕಾಣಿಸಿಕೊಂಡು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿವೆ. ಅಗ್ನಿ ಧಗಧಗಿಸುತ್ತಿದ್ದಂತೆ ಅನೇಕ ಕಾರ್ಮಿಕರು ಕಾರ್ಖಾನೆಯಿಂದ ಹೊರಗೆ ಓಡಿ ಬಂದಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ ಎಂದು ಪೆÇಲೀಸರು ಹೇಳಿದ್ದಾರೆ.
ಆ ಪ್ರದೇಶದಲ್ಲಿ ಬೆಂಕಿ ಮತ್ತು ದಟ್ಟ ಕಪ್ಪು ಹೊಗೆ ಆವರಿಸಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಗಾಯಾಳುಗಳಿಗೆ ಆಸ್ಪತೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟಕದೊಳಗೆ ಸಿಲುಕಿರಬಹುದಾದ ಕಾರ್ಮಿಕರಿಗಾಗಿ ಶೋಧ ಮುಂದುವರಿದಿದೆ.
ರಾಸಾಯನಿಕ ಕಾರ್ಖಾನೆ ಧಗಧಗ : ಈ ಮಧ್ಯೆ, ಮಹಾರಾಷ್ಟ್ರದ ಮುಂಬೈ ಸಮೀಪ ಜೋಗೀಶ್ವರದ ರಾಸಾಯನಿಕ ತಯಾರಿಕೆ ಕಾರ್ಖಾನೆಯಲ್ಲಿ ನಿನ್ನೆ ರಾತ್ರಿ ಬೆಂಕಿ ಆಕಸ್ಮಿಕದಿಂದ ಅಪಾಋ ನಷ್ಟ ಸಂಭವಿಸಿದೆ. ಆದರೆ ಸಾವು-ನೋವಿನ ವರದಿಯಾಗಿಲ್ಲ.