ಕಾಶ್ಮೀರದ ಬಂಡಿಪೊರಾಯಲ್ಲಿ ಭಯೋತ್ಪಾದಕರೊಂದಿಗೆ ಕಾಳಗ

Kulgam: Soldiers during an operation launched after at least two Indian Army soldiers were killed and three wounded when militants attacked a military vehicle on the Jammu-Srinagar national highway in Kulgam district on June 3, 2017. (Photo: IANS)

ಶ್ರೀನಗರ,ಫೆ.22-ಜಮ್ಮು ಮತ್ತು ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಇಂದು ಭಯೋತ್ಪಾದಕರೊಂದಿಗೆ ನಡೆದ ಗುಂಪಿನ ಕಾಳಗದಲ್ಲಿ ಸೇನಾ ಕಮಾಂಡೋಗಳು ಗಾಯಗೊಂಡಿದ್ದಾರೆ.

ನಾಲ್ವರು ಉಗ್ರರು ನುಸುಳಿರುವ ಖಚಿತ ವರ್ತಮಾನದ ಮೇರೆಗೆ ಬಂಡಿಪೊರದ ಹಾಜಿನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಭಯೋತ್ಫಾದಕರು ಯೋಧರತ್ತ ಗುಂಡು ಹಾರಿಸಿದರು.

ಗುಂಡಿನ ಕಾಳಗದ ವೇಳೆ ಕೆಲವು ಕಮಾಂಡೋಗಳಿಗೆ ಗಾಯಗಳಾಗಿದ್ದು , ಉಗ್ರರು ಪರಾರಿಯಾಗಿದ್ದಾರೆ. ಅವರಿಗಾಗಿ ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ