ಮಿಚಿಗನ್, ಫೆ.22-ರೂಪದರ್ಶಿಯೊಬ್ಬಳು ತನ್ನ ಪತಿ, ಮತ್ತು ಇಬ್ಬರು ಮಕ್ಕಳ ಮೇಲೆ ಗುಂಡು ಹಾರಿಸಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೆರಿಕದ ಮಿಚಿಗನ್ನಲ್ಲಿ ನಡೆದಿದೆ.
ಲಾರೇನ್ ಸ್ಟೌರ್ಟ್ ತನ್ನ ಪತಿ ಡೇನಿಯಲ್ (42), ಪುತ್ರ ಸ್ಟೀವನ್ (27) ಮತ್ತು ಪುತ್ರಿ ಬೇಥಾನಿ(24) ಅವರ ತಲೆಗಳಿಗೆ ಗುಂಡು ಹಾರಿಸಿ ಕೊಂದು ನಂತರ ತಾನೂ ಅದೇ ಗನ್ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಿಚಿಗನ್ನ ಕೀಗೋ ಹಾರ್ಬರ್ ಪ್ರದೇಶದ ಮನೆಯಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಸತಿ-ಪತಿ ಅನ್ಯೋನ್ಯವಾಗಿದ್ದು, ಇದೊಂದು ಸಂತೃಪ್ತ ಸಂಸಾರವಾಗಿತ್ತು. ಲಾರೇನ್ ಈ ಕೃತ್ಯ ಎಸಗಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂಬುದು ಬಿಡಿಸಲಾಗದ ಒಗಟಾಗಿದೆ ಎಂದು ಕುಟುಂಬದ ಬಂಧು-ಮಿತ್ರರು ತಿಳಿಸಿದ್ದಾರೆ.
ಪೆÇಲೀಸರು ಕೊಲೆ ಮತ್ತು ಆತ್ಮಹತ್ಯೆ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.