ಮಾಹಿತಿ ಸಿಂಧು ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ – ತನ್ವೀರ್‍ಸೇಠ್

ಬೆಂಗಳೂರು, ಫೆ.21-ಮಾಹಿತಿ ಸಿಂಧು ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಕಂಪ್ಯೂಟರ್ ಕಲಿಕೆಗೆ ಹೆಚ್ಚುವರಿ ಸೌಲಭ್ಯ ಒದಗಿಸಲು ಮುಂದಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್ ಹೇಳಿದರು.

ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ತುಮಕೂರು ನಗರ ಕ್ಷೇತ್ರ ಶಾಸಕ ರಫಿಕ್ ಅಹಮ್ಮದ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಐಟಿಸಿ (ಮಾಹಿತಿ ಸಿಂಧು ಯೋಜನೆ) 1,2,3 ಅನುಷ್ಠಾನಗೊಂಡಿವೆ. ಆದರೆ, ಪೂರ್ತಿಯಾಗಿ ಕಂಪ್ಯೂಟರ್ ಕಲಿಸಲು ಆಗಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಹೆಚ್ಚುವರಿ ಕಂಪ್ಯೂಟರ್ ಮತ್ತು ಸೌಲಭ್ಯಗಳನ್ನು ಒದಗಿಸಿ ಮಕ್ಕಳಿಗೆ ಕಂಪ್ಯೂಟರ್ ಕಲಿಸಲಾಗುವುದು. ತುಮಕೂರು ನಗರ ಶಾಲೆಗಳಿಗೂ ಹೆಚ್ಚುವರಿ ಕಂಪ್ಯೂಟರ್‍ಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ