ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ರಸ್ತೆಯಲ್ಲಿ ಪಾಪಡ್ ಮಾರುತ್ತಿದ್ದಾರೆ.. ಅರೆ ಇದು ನಿಜವಾದರೂ ರಿಯಲ್ ಅಲ್ಲ.
ತಮ್ಮ ಹೊಸ ಚಿತ್ರ ಸೂಪರ್ 30 ಗಾಗಿ ಹೃತಿಕ್ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯನಂತೆ ಸೈಕಲ್ ಮೇಲೆ ಪಾಪಡ್ ಮಾರುತ್ತಿದ್ದಾರೆ.
ಸದ್ಯ ಇವರೇ ಹೃತಿಕ್ ರೋಷನ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಷ್ಟು ಪಾತ್ರದಲ್ಲಿ ಮಗ್ನರಾಗಿದ್ದಾರೆ. ಈ ಗೆಟಪ್ನಲ್ಲಿ ಇವರನ್ನು ಗುರುತು ಹಿಡಿಯುವುದು ಕಷ್ಟ.
ಚಿತ್ರದಲ್ಲಿ ಆನಂದ್ ಕುಮಾರ್ ಪಾತ್ರ ನಿರ್ವಹಿಸುತ್ತಿರುವ ಹೃತಿಕ್ ಆನಂದ್ ನಂತೆಯೇ ಸಾಮಾನ್ಯನಾಗಿ ಪಾಪಡ್ ಮಾರುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಗಣಿತಜ್ಞ ಆನಂದ್ ಕುಮಾರ್ ಜೀವನಾಧಾರಿತ ಕುರಿತು ಈ ಚಿತ್ರವಾಗಿದೆ.