ಬೆಂಗಳೂರು, ಫೆ.20-ರಾಜ್ಯ ಜ್ಯಾತ್ಯಾತೀತ ಜನತಾದಳ ಕಾರ್ಮಿಕ ಮತ್ತು ವೈದ್ಯಕೀಯ ಘಟಕ ಹಾಗೂ ಸಪ್ತಗಿರಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಕ್ರಾಸ್‍ನಲ್ಲಿ ನಾಳೆ ಬೆಳಿಗ್ಗೆ 9 ಗಂಟೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಶಸ್ತ್ರ ಚಿಕಿತ್ಸಾ ತಜ್ಞರ ಟಿ.ಎಚ್.ಆಂಜನಪ್ಪ ಮತ್ತು ಡಾ.ಎಚ್.ಜಿ.ವಿಜಯಕುಮಾರ್ ಮತ್ತು ತಂಡದ ನುರಿತ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಲಾಗುವುದು. ಸಾಮಾನ್ಯ ರೋಗ ಚಿಕಿತ್ಸೆ, ಮೂಳೆ ಮತ್ತು ಕೀಲುರೋಗ ಚಿಕಿತ್ಸೆ, ಕಿವಿ, ಮೂಗು, ಗಂಟಲು ಚಿಕಿತ್ಸೆ, ಕಣ್ಣಿನ ತಪಾಸಣೆ, ಮಕ್ಕಳ ರೋಗ, ಚರ್ಮರೋಗ, ಸ್ತ್ರೀರೋಗ, ಸಾಮಾನ್ಯ ಶಸ್ತ್ರಚಿಕಿತ್ಸೆ, ಹೃದ್ರೋಗ, ಸಕ್ಕರೆ ಕಾಯಿಲೆಯ ಚಿಕಿತ್ಸಾ ಶಿಬಿರದಲ್ಲಿ ತಪಾಸಣೆ ನಡೆಯಲಿದೆ.
ರಕ್ತದೊತ್ತಡ ಪರೀಕ್ಷೆ ಮತ್ತು ಇಸಿಜಿ ಎಕೋ ಸ್ಕ್ಯಾನಿಂಗ್ ಮಾಡಲಾಗುವುದು.
ಹೃದಯರೋಗ, ನರರೋಗ, ಕಿಡ್ನಿಯಲ್ಲಿನ ಕಲ್ಲಿನ ಸಮಸ್ಯೆಗಳಿಗೆ ಯಶಸ್ವಿನಿ ಕಾರ್ಡ್ ಹೊಂದಿರುವವರಿಗೆ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ನಡೆಸಲಾಗುವುದು.
ಶಿಬಿರದಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ಔಷಧಿಗಳನ್ನು ವಿತರಣೆ ಮಾಡಲಾಗುವುದು. ಹಳೆಯ ವೈದ್ಯಕೀಯ ತಪಾಸಣಾ ದಾಖಲಾತಿಗಳು ಇದ್ದಲ್ಲಿ ತಪ್ಪದೇ ತರತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 7019270082, 9972622960, 9972140111 ಸಂಪರ್ಕಿಸಬಹುದಾಗಿದೆ.