
ಬೈರುತ್, ಫೆ.20-ಬಂಡುಕೋರರ ಪ್ರಾಬಲ್ಯವಿರುವ ಸ್ಥಳಗಳ ಮಳೆ ಸಿರಿಯಾ ಸೇನೆ ನಡೆಸಿದ ಬಾಂಬ್ ದಾಳಿಯಲ್ಲಿ 20 ಮಕ್ಕಳೂ ಸೇರಿದಂತೆ 100ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿರುವ ಘಟನೆ ಪೂರ್ವ ಗೌಟಾದಲ್ಲಿ ನಡೆದಿದೆ.
ಡಮಾಸ್ಕರ್ ಹೊರ ವಲಯದಲ್ಲಿ ನಡೆದ ಈ ದಾಳಿಯಲ್ಲಿ ಸಾವು-ನೋವು ಸಂಭವಿಸಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾನವ ಹಕ್ಕುಗಳ ಕುರಿತ ಸಿರಿಯಾ ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದೆಲ್ ರೆಹಮಾನ್ ಹೇಳಿದ್ದಾರೆ.