ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನದ ಡ್ರಗ್ ಸ್ಮಗ್ಲರ್‍ನನ್ನು ಹೊಡೆದುರುಳಿಸಿರುವ ಭಾರತೀಯ ಭದ್ರತಾ ಪಡೆ

ಅಮೃತಸರ್, ಫೆ.20-ಪಂಜಾಬ್‍ನ ಇಂಡೋ-ಪಾಕ್ ಅಂತಾರಾಷ್ಟ್ರೀಯ ಗಡಿ(ಐಬಿ)ಯಲ್ಲಿ ಇಂದು ಮುಂಜಾನೆ ಪಾಕಿಸ್ತಾನದ ಡ್ರಗ್ ಸ್ಮಗ್ಲರ್‍ನನ್ನು ಹೊಡೆದುರುಳಿಸಿರುವ ಭಾರತೀಯ ಭದ್ರತಾ ಪಡೆ, ಸುಮಾರು 50 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ಮತ್ತು ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು-ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯೊಂದಿಗೆ ಪಾಕಿಸ್ತಾನದಿಂದ ಮಾದಕ ವಸ್ತು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಹಾಗೂ ಗಡಿಯೊಳಗೆ ನುಸುಳುವಿಕೆ ಯತ್ನವನ್ನು ಯಶಸ್ವಿಯಾಗಿ ವಿಫಲಗೊಳಿಸಲಾಗಿದೆ.

ಪಂಜಾಬ್‍ನ ಅಂತಾರಾಷ್ಟ್ರೀಯ ಗಡಿ ಸಮೀಪ ಫಿರೋಜ್‍ಪುರ್ ವಲಯದ ಬರ್ರೆಕೆ ಪೆÇೀಸ್ಟ್‍ನಲ್ಲಿ ಇಂದು ನಸುಕಿನಲ್ಲಿ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಮತು ಪಂಜಾಬ್ ಪೆÇಲೀಸ್ ಇಲಾಖೆಯ ವಿಶೇಷ ಕಾರ್ಯಪಡೆ(ಎಸ್‍ಟಿಎಫ್) ಈ ಜಂಟಿ ಕಾರ್ಯಾಚರಣೆ ನಡೆಸಿದೆ.
ಗಡಿಯಾಚೆಯಿಂದ (ಪಾಕಿಸ್ತಾನ ಕಡೆಯಿಂದ) ಭಾರೀ ಮಾಲು ಮತ್ತು ಅಪಾರ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ನುಸುಳುಕೋರರು ಐಬಿ ಮೂಲಕ ಭಾರತದೊಳಗೆ ನುಸುಳುತ್ತಿದ್ದಾರೆ ಎಂಬ ಖಚಿತ ಸುಳಿವಿನ ಮೇರೆಗೆ ಜಂಟಿ ಪಡೆ ನಿನ್ನೆ ರಾತ್ರಿಯಿಂದಲೇ ಕಾರ್ಯಾಚರಣೆಗೆ ಇಳಿದಿತ್ತು.

ಇಂದು ನಸುಕಿನಲ್ಲಿ ಪಾಕಿಸ್ತಾನದ ಇಬ್ಬರು ಕಳ್ಳಸಾಗಣೆದಾರರು ಭಾರತೀಯ ಗಡಿಯೊಳಗೆ ಐಬಿ ಮೂಲಕ ರಹಸ್ಯವಾಗಿ ನುಸುಳುತ್ತಿದ್ದರು. ಇದೇ ಸಂದರ್ಭದಲ್ಲಿ ಸ್ಮಗ್ಲರ್‍ಗಳು ಯೋಧರ ಮೇಲೆ ಗುಂಡು ಹಾರಿಸಿದರು. ಆಗ ಜಂಟಿ ಪಡೆ ಪ್ರತಿದಾಳಿ ನಡೆಸಿತು. ಈ ದಾಳಿಯಲ್ಲಿ ಪಾಕಿಸ್ತಾನದ ಕಳ್ಳಸಾಗಣೆದಾರನೊಬ್ಬ ಹತನಾಗಿ, ಮತ್ತೊಬ್ಬ ಕತ್ತಲಲ್ಲಿ ಪರಾರಿಯಾದ ಎಂದು ಬಿಎಸ್‍ಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹತ ಕಳ್ಳಸಾಗಣೆದಾರನಿಂದ ಸುಮಾರು 50 ಕೋಟಿ ರೂ. ಮೌಲ್ಯದ ಹೆರಾಯಿನ್, ಒಂದು ಚೀನಿ ಪಿಸ್ತೂಲ್ ಮತ್ತು ಮ್ಯಾಗಝೈನ್, 17 ಬುಲೆಟ್‍ಗಳು, ಪಾಕಿಸ್ತಾನದ 110 ರೂ. ಕರೆನ್ಸಿ, 2 ಮೊಬೈಲ್ ಫೆÇೀನ್‍ಗಳು, 3 ಪಾಕಿಸ್ತಾನಿ ಮೊಬೈಲ್ ಫೆÇೀನ್ ಸಿಮ್ ಕಾರ್ಡ್‍ಗಳು, ಒಂದು ಪ್ಲಾಸ್ಟಿಕ್ ಫೈಪ್, ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತೊಂದು ಪ್ರಕರಣದಲ್ಲಿ, ಫಝಿಲ್‍ಕಾ ಜಿಲ್ಲೆಯೆ ಮಹರ್‍ಸೋನಾ ಗಡಿ ಠಾಣ್ಯ ಬಳಿ 30 ವರ್ಷದ ಪಾಕಿಸ್ತಾನದ ಲಾಹೋರ್ ನಿವಾಸಿಯನ್ನು ಬಿಎಸ್‍ಎಫ್ ಯೋಧರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ