ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ವಿರುದ್ಧ ವಾಗ್ದಾಳಿ

ಬೆಂಗಳೂರು ಫೇ 19 – ಕೆಪಿಸಿಸಿ ಕಚೇರಿಯಲ್ಲಿ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ  ಕಳೆದ ಭಾರಿ ಪ್ರಧಾನಿ ೧೦% ಸರ್ಕಾರ ಎಂದಿದ್ದರು, ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದರು. ಈ ಭಾರಿಯೂ ಅದನ್ನೇ ಹೇಳಿದ್ದಾರೆ, ಅವರ ಭಾಷಣದಲ್ಲಿ ಏನೇನೂ ಇಲ್ಲ. ಕ್ರಾಂತಿಕಾರಿ ಭಾಷಣ ಅಂತ ಹೇಳಿದ್ದಾರೆ, ಜನರ ಮುಂದೆ ಹೇಳೋಕೆ ಅವರಿಗೆ ವಿಷಯಗಳೇ ಇಲ್ಲ.  ಮೈಸೂರು- ಉದಯಪುರ ರೈಲ್ವೆ ಯೋಜನೆ ಕ್ರಾಂತಿಕಾರಿಯಂತೆ. ಅದು ಹೇಗೆ ಕ್ರಾಂತಿಕಾರಿ ಅನ್ನೋದ ಅವರೇ ಹೇಳಬೇಕು ಪ್ರಧಾನಿ ವಿರುದ್ಧ ದಿನೇಶ್ ವಾಗ್ದಾಳಿ

ಪ್ರಧಾನಿಯವರು ಸಿಎಂ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಿಂದ ಸಿಎಂ ಬೆಂಗಳೂರಿಗೆ ಬಂದು ಕೆಟ್ಟಿದ್ದಾರಂತೆ ಹಾಗಾದ್ರೆ ಬೆಂಗಳೂರಿಗೆ ಬಂದವರೆಲ್ಲ ಕೆಟ್ಟುಹೋಗಿದ್ದಾರಾ. ಅಂತ ಮಾತು ಮೋದಿ ಹೇಳಿದ್ದು ಸರಿಯಲ್ಲ.

 

ಪ್ರಧಾನಿ ಮೂಗಿನ ಕೆಳಗೆ ಲೂಟಿ ನಡೆಯುತ್ತಿದೆ, ಲೂಟಿ ಹೊಡೆದು ದೇಶಬಿಟ್ಟು ಹೋಗುತ್ತಿದ್ದಾರೆ. ನೀರವ್ ಮೋದಿ,ಪ್ರಧಾನಿ ಹತ್ತಿರದವರು ಬ್ಯಾಂಕ್ ಲೂಟಿಯನ್ನೇ ಹೊಡೆದಿದ್ದಾರೆ ಇದರ ಬಗ್ಗೆ ಪ್ರಧಾನಿಯವರು ಯಾಕೆ ಮಾತನಾಡುತ್ತಿಲ್ಲ? ವಿಜಯ್ ಮಲ್ಯ,ನೀರವ್ ಮೋದಿ,ಲಲಿತ್ ಮೋದಿ ಎಲ್ಲರೂ ದೇಶ ಬಿಟ್ಟರು, ಇವರ ನೆರಳಿನಲ್ಲೇ ದೇಶಬಿಟ್ಟು ಹೋದರು ಇದರ ಬಗ್ಗೆ ಪ್ರಧಾನಿ ಚಕಾರವೆತ್ತುತ್ತಿಲ್ಲ

 

ಚೆಕ್ ಮೂಲಕ ಲಂಚ ಪಡೆದವರು ಯಾರು. ಅದರ ಬಗ್ಗೆ ಇಡೀ ಜಗತ್ತಿಗೇ ಗೊತ್ತಿದೆ ಎಂದು ಬಿಎಸ್ ವೈ ವಿರುದ್ಧವೂ ದಿನೇಶ್ ವಾಗ್ದಾಳಿ

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ