ಅಹಮದಾಬಾದ್, ಫೆ.20-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ನ ನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. 75 ಮುನಿಸಿಪಾಲಿಟಿಗಳಲ್ಲಿ 47 ಪಾಲಿಕೆಗಳನ್ನು ಕಮಲ ತನ್ನದಾಗಿಸಿಕೊಂಡಿದೆ.
ವಿರೋಧ ಪಕ್ಷ ಕಾಂಗ್ರೆಸ್ 16 ಪಾಲಿಕೆಗಳನ್ನು ಕೈ ವಶ ಮಾಡಿಕೊಂಡಿದ್ದರೆ, ಎನ್ಸಿಪಿ ಮತ್ತು ಬಿಎಸ್ಪಿ ತಲಾ ಒದೊಂದು ಸ್ಥಾನಗಳಲ್ಲಿ ಜಯ ಸಾಧಿಸಿದೆ.
ಪಾಲಿಕೆ ಚುನಾವಣೆಗಳೊಂದಿಗೆ ಎರಡು ಜಿಲ್ಲಾ ಪಂಚಾಯಿತಿಗಳು, 17 ತಾಲ್ಲೂಕು ಪಂಚಾಯಿತಿಗಳು ಮತ್ತು 1,423 ಗ್ರಾಮ ಪಂಚಾಯಿತಿಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆದಿತ್ತು. 295 ಗ್ರಾಮ ಪಂಚಾಯಿತಿಗಳ ಸರಪಂಚ್ರನ್ನು ಗ್ರಾಮಸ್ಥರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.






