![modis-charm-in-mysore - Copy](http://kannada.vartamitra.com/wp-content/uploads/2018/02/modis-charm-in-mysore-Copy-678x354.jpeg)
ಮೈಸೂರು , ಫೆ.19 – ಮೈಸೂರಿನಲ್ಲಿಂದು ದಸರೆಯ ಸಂಭ್ರಮ. ಭಾರತದ ಹೆಮ್ಮೆಯ ಪ್ರಧಾನಿ ವಿಶ್ವನಾಯಕ ಶ್ರೀ ನರೇಂದ್ರ ಮೋದಿಯವರ ಭಾಷಣವನ್ನು ಕೇಳಲು ಜನಜಾತ್ರೆಯೇ ಸೇರಿತ್ತು. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮೋದಿಯವರಿಗೆ ಶಾಲು ಹೊದಿಸಿ ಆತ್ಮೀಯ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು ಮೈಸೂರಿಗೆ ನೂತನ ಸ್ಯಾಟಲೈಟ್ ರೈಲ್ವೆ ಸ್ಟೇಷನ್ ಹಾಗು ಮೈಸೂರು-ಬೆಂಗಳೂರು ನಡುವಣ ಹೆದ್ದಾರಿ ಷಟ್ಪಥೀಕರಣದ ಎರಡು ನೂತನ ಯೋಜನೆಗಳನ್ನು ಘೋಷಿಸಿದರು. ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಮೈಸೂರಿನ ಜನತೆ ಮೋದಿಯವರ ಭಾಷಣವನ್ನು ಅತ್ಯಂತ ತನ್ಮಯತೆಯಿಂದ ಆಲಿಸಿದರು. ಇದಕ್ಕೂ ಮೊದಲು ಮಾತನಾಡಿದ ಮಾನ್ಯ ಯಡಿಯೂರಪ್ಪನವರು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಸಭಿಕರಲ್ಲಿ ಮನವಿ ಮಾಡಿದರು. ಮುಖಂಡರುಗಳಾದ ಶ್ರೀ ಅನಂತ್ ಕುಮಾರ್, ಶ್ರೀ ಸದಾನಂದ ಗೌಡ, ಶ್ರೀ ಪೀಯೂಶ್ ಗೋಯೆಲ್, ಶ್ರೀ ಪ್ರಕಾಶ್ ಜಾವ್ಡೇಕರ್, ಶ್ರೀ ಮುರಳೀಧರ್ ರಾವ್, ಶ್ರೀ ಆರ್ ಅಶೋಕ್, ಶ್ರೀ ಗೋವಿಂದ್ ಕಾರಜೋಳ, ಶ್ರೀ ಪ್ರತಾಪ್ ಸಿಂಹ, ಶ್ರೀಮತಿ ಪುರಂದೇಶ್ವರಿ, ಶ್ರೀ ಶ್ರೀರಾಮುಲು, ಶ್ರೀ ಅರವಿಂದ್ ಲಿಂಬಾವಳಿ, ಶ್ರೀ ಸಿಟಿ ರವಿ, ಶ್ರೀ ಶಿವಕುಮಾರ್ ಉದಾಸಿ, ಕು. ಶೋಭಾ ಕರಂದ್ಲಾಜೆ, ಶ್ರೀ ಎನ್. ರವಿಕುಮಾರ್ ಮುಂತಾದವರು ಸಮಾವೇಶದಲ್ಲಿ ಉಪಸ್ಥಿತರಿದ್ದರು.