![modi](http://kannada.vartamitra.com/wp-content/uploads/2018/02/modi-1-678x381.jpg)
ಶ್ರವಣಬೆಳಗೊಳ:ಫೆ:19 ಸಮಯ ಬದಲಾದ ಹಾಗೂ ಅದಕ್ಕೆ ಹೊಂದಿಕೊಂಡು ಬದಲಾಗಿ ಜೀವನ ಮಾಡುವುದು ನಮ್ಮ ನಮ್ಮ ಸಮಾಜ ನಮಗೆ ಕಲಿಸಿಕೊಟ್ಟಿರುವ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಶೇಕದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗಿಗಗಳ ಹಾಗೂ ಯೋಗಿನಿಯರು ನಮ್ಮನ್ನು ಸಕಾರಾತ್ಮಕ ಶಕ್ತಿಯೊಂದಿಗೆ ಅಭಿವೃದ್ದಿಯೆಡೆಗೆ ಕರೆದೊಯ್ಯುತ್ತಿದ್ದಾರೆ ಎಂದರು.
ನಮ್ಮ ಯೋಗಿಗಳು ಹಾಗೂ ಯೋಗಿನಿಯರು ಸದಾ ನಮ್ಮ ಸಮಾಜದ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಈ ಸೇವೆಯೇ ನಮ್ಮನ್ನು ಸಕಾರಾತ್ಮಕತೆಯೆಡೆಗೆ ಕೊಂಡೊಯ್ಯುತ್ತಿದೆ. ಈ ಶಕ್ತಿಗಳೇ ಕಾಲಮಾನ ಬದಲಾದಂತೆ ನಾವೂ ಸಹ ಅದಕ್ಕೆ ಹೊಂದಿಕೊಂಡು ಜೀವಿಸುವುದನ್ನು ಕಲಿಸಿವೆ ಎಂದು ದೇಶ ಹಾಗೂ ನಮ್ಮ ಸಮಾಜಕ್ಕೆ ಯೋಗಿಗಳ ಕೊಡುಗೆಯನ್ನು ಸ್ಮರಿಸಿದರು.
ಆರೋಗ್ಯದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿಯವರು, ತನ್ನ ನಾಗರಿಕರಿಗೆ ಉತ್ತಮ ಹಾಗೂ ಅಗತ್ಯವಿರುವ ಆರೋಗ್ಯ ಸೇವೆಗಳನ್ನು ಒದಗಿಸುವುದು ಪ್ರತಿ ಸರ್ಕಾರದ ಕರ್ತವ್ಯ ಎಂದು ಕರೆ ನೀಡಿದರು.
12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ನಮ್ಮ ದೇಶದಲ್ಲಿ ಬೇಕಾದಷ್ಟು ಧಾರ್ಮಿಕ ಕಾರ್ಯಗಳು ನಡೆಯುತ್ತವೆ ಇವುಗಳೊಂದಿಗೆ ಸಾಮಾಜಿಕ ಕಾರ್ಯವೂ ನಡೆಯಬೇಕಾಗಿದೆ. ಇಂದು ಜನತೆಗಾಗಿ ಆಸ್ಪತ್ರೆ ಲೋಕಾರ್ಪಣೆಗೊಳಿಸುವ
ಭಾಗ್ಯ ನನ್ನ ಪಾಲಿಗೆ ದೊರಕಿತು. ನಮ್ಮ ಮುನಿಗಳು ಸಾಧು ಸಂತರು ದೇಶದ ಸಾಮಾಜಿಕ ಸ್ವಾಸ್ಥ್ಯಕ್ಕೆ ಶ್ರಮ ವಹಿಸಿದ್ದಾರೆ ಎಂದರು.