ಹೊಸದಿಲ್ಲಿ : ಬ್ಯಾಂಕ್ ಗೆ 800 ಕೋಟಿ ರೂ. ವಂಚನೆ ಸಂಬಂಧ ರೋಟೋಮ್ಯಾಕ್ ಪೆನ್ ಪ್ರಮೋಟರ್ ವಿಕ್ರಮ್ ಕೊಠಾರಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬ್ಯಾಂಕ್ ಆಫ್ ಬರೋಡ ನೀಡಿದ ದೂರಿನ ಅನ್ವಯ ಸಿಬಿಐ ಸೋಮವಾರ ಎಫ್ಐಆರ್ ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ನಸುಕಿನ ವೇಳೆಯಲ್ಲಿ ಕೊಠಾರಿಯ ಕಾನ್ಪುರ ನಿವಾಸ ಮತ್ತು ಕಚೇರಿಗೆ ದಾಳಿ ಮಾಡಿದ ಸಿಬಿಐ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡಿತು. ಆದರೆ ಈ ತನಕ ಯಾರನ್ನೂ ಬಂಧಿಸಲಾಗಿಲ್ಲ ಎಂದು ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ಹೇಳಿದರು.
ಕೊಠಾರಿ, ಅವರ ಪತ್ನಿ ಮತುತ ಪುತ್ರನನ್ನು ಸಿಬಿಐ ಪ್ರಶ್ನಿಸುತ್ತಿದೆ ಎಂದವರು ಹೇಳಿದರು.
ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಗಿಗೆ 11,400 ಕೋಟಿ ರೂ. ವಂಚಿಸಿದ ಬೆನ್ನಿಗೇ ಬೆಳಕಿಗೆ ಬಂದಿರುವ ಎರಡನೇ ಅತೀ ದೊಡ್ಡ ಹಣಕಾಸು ವಂಚನೆ ಹಗರಣ ಇದಾಗಿದೆ.
ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿ, ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿ (ಗೀತಾಂಜಲಿ ಜೆಮ್ಸ್ ಸಮೂಹ ಕಂಪೆನಿಗಳ ಪ್ರಮೋಟರ್) ಈಗಾಗಲೇ ವಿದೇಶಕ್ಕೆ ಪಲಾಯನ ಮಾಡಿದ್ದಾರೆ.